More

    ಜೈನ ಸಂಘದಿಂದ ರಕ್ತದಾನ ಶಿಬಿರ ನಾಳೆ: ಅಧ್ಯಕ್ಷ ಮಹೇಂದ್ರ ಚೋಪ್ರಾ ಮಾಹಿತಿ

    ಕೊಪ್ಪಳ: ಆಜಾದಿ ಕಾ ಅಮೃತ ಮಹೋತ್ಸವ ಮತ್ತು ಚಾತುರ್ಮಾಸ್ಯ ಅಂಗವಾಗಿ ಸೆ.17 ರಂದು ಏಕಕಾಲಕ್ಕೆ ವಿಶ್ವಾದ್ಯಂತ ಮೆಗಾ ಬ್ಲಡ್ ಡೊನೇಷನ್ ಡ್ರೈವ್ ಹಮ್ಮಿಕೊಳ್ಳಲಾಗಿದ್ದು, ನಗರದ ಥೇರಾಪಂತ್ ಸಭಾಭವನದಲ್ಲೂ ಶಿಬಿರ ಆಯೋಜಿಸಿದ್ದೇವೆ ಎಂದು ಜೈನ ಸಂಘದ ಅಧ್ಯಕ್ಷ ಮಹೇಂದ್ರ ಚೋಪ್ರಾ ತಿಳಿಸಿದರು.

    ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಾಲ್ಕು ತಿಂಗಳ ಚಾರ್ತುಮಾಸ್ಯ ನಮಗೆ ಬಹುಮುಖ್ಯವಾಗಿದೆ. ಜಪ, ತಪದ ಮೂಲಕ ಆಚರಣೆ ಮಾಡುತ್ತೇವೆ. ರೆಡ್‌ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ರಕ್ತದಾನ ಮಾಡಲಿದ್ದೇವೆ. ಶ್ವೇತಾಂಬರ ಮತ್ತು ದಿಗಂಬರ ಎರಡೂ ಪಂಗಡದವರು ಪಾಲ್ಗೊಳ್ಳುತ್ತೇವೆ. ವಿಶ್ವಾದ್ಯಂತ ಎರಡು ಸಾವಿರ ಶಿಬಿರಗಳ ಮೂಲಕ ಒಂದೂವರೆ ಲಕ್ಷ ಯುನಿಟ್ ರಕ್ತದಾನ ಮಾಡುವ ಗುರಿ ಹೊಂದಲಾಗಿದೆ. ಕೊಪ್ಪಳದಲ್ಲಿ 200 ರಿಂದ 300 ಯುನಿಟ್ ರಕ್ತ ಸಂಗ್ರಹವಾಗುವ ನಿರೀಕ್ಷೆ ಇದೆ. ಶಿಬಿರದಲ್ಲಿ ಸಂಘ-ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಯುವಕರು ಸ್ವಯಂ ಪ್ರೇರಿತರಾಗಿ ಪಾಲ್ಗೊಳ್ಳಬಹುದು ಎಂದರು.

    ಸಂಚಾಲಕ ದಿನೇಶ್ ಸಂಚತಿ ಮಾತನಾಡಿ, ಕಳೆದ ಬಾರಿ ಆಯೋಜಿಸಿದ್ದ ರಕ್ತದಾನ ಶಿಬಿರ ಗಿನ್ನೆಸ್ ದಾಖಲೆಯಾಗಿದೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲೂ ನಮೂದಾಗಿದೆ. ಅದೇ ಮಾದರಿಯಲ್ಲಿ ಈ ಶಿಬಿರವೂ 18 ದೇಶಗಳ 36 ಭಾಗಗಳಲ್ಲಿ ನಡೆಯಲಿದೆ. ತಾಲೂಕು ಮಟ್ಟದಲ್ಲೂ ಶಿಬಿರಗಳಿರಲಿವೆ ಎಂದು ತಿಳಿಸಿದರು. ಥೇರಾಪಂತ್ ಯುವ ಪರಿಷತ್ ಅಧ್ಯಕ್ಷ ಪಂಕಜ್ ಭಾಫ್ನಾ, ಲಲಿತ್ ಜೈನ್, ಪ್ರಮೋದ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts