More

    ಸೂಕ್ತ ಚಿಕಿತ್ಸೆ ಮೂಲಕ ಕ್ಷಯ ತಡೆಗಟ್ಟಲು ಅಧಿಕಾರಿಗಳಿಗೆ ಜಿಪಂ ಸಿಇಒ ರಘುನಂದನ್‌ಮೂರ್ತಿ ಸೂಚನೆ

    ಕೊಪ್ಪಳ: ಜಿಲ್ಲೆಯಲ್ಲಿ ಈಗಾಗಲೇ ಕ್ಷಯ ರೋಗಿಗಳನ್ನು ಗುರುತಿಸಿದ್ದು, ಅವರಿಗೆ ಉತ್ತಮ ಚಿಕಿತ್ಸೆ ನೀಡುವ ಮೂಲಕ ರೋಗ ಹರಡುವಿಕೆ ತಡೆಯಿರಿ ಎಂದು ಅಧಿಕಾರಿಗಳಿಗೆ ಜಿಪಂ ಸಿಇಒ ರಘುನಂದನ್‌ಮೂರ್ತಿ ಸೂಚಿಸಿದರು.

    ನಗರದ ಜಿಪಂ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಕ್ಷಯ ರೋಗ ದಿನಾಚರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಕ್ಷಯ ರೋಗ ದಿನಾಚರಣೆ ಪ್ರಯುಕ್ತ ಮಾ.31ವರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾ.17 ರಂದು ಗಂಗಾವತಿಯಲ್ಲಿ ಹ್ಯಾಂಕಿ ರ‌್ಯಾಲಿ, 23 ರಂದು ಕುಕನೂರಿನಲ್ಲಿ ಮ್ಯಾರಥಾನ್, 24 ರಂದು ಕಾರಟಗಿಯಲ್ಲಿ ಕ್ಷಯ ಕುರಿತು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ಹೋಟೆಲ್, ಆಹಾರ ಪದಾರ್ಥಗಳ ತಯಾರಕರು, ಚಿಲ್ಲರೆ ವ್ಯಾಪಾರಸ್ಥರಿಗೆ ರೋಗದ ಕುರಿತು ಅರಿವು ಮೂಡಿಸಿ. ಎಲ್ಲ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಕ್ಷಯರೋಗ ತಪಾಸಣೆ ನಡೆಸಿ. ಕಾರ್ಖಾನೆ, ತಾಪಂ, ಗ್ರಾಪಂ, ಆಯುಷ್ ಇಲಾಖೆಯೊಂದಿಗೆ ಸಭೆ ನಡೆಸಿ, ಜಾಗೃತಿ ಕೈಗೊಳ್ಳಿ. ಪ್ರತಿ ತಾಲೂಕಿನಲ್ಲಿ 5 ರಿಂದ 10 ಟಿ.ಬಿ.ಚಾಂಪಿಯನ್ಸ್‌ಗಳ ವಿಡಿಯೋಗಳನ್ನು ದಾಖಲಿಸಿ. ಖಾಸಗಿ ವೈದ್ಯರು, ಫಾರ್ಮಾಸಿಸ್ಟ್ ಮತ್ತು ಪ್ರಯೋಗಾಲಯ ಸಿಬ್ಬಂದಿಗೂ ಕ್ಷಯ ಬಗ್ಗೆ ಮಾಹಿತಿ ತಿಳಿಸಿ ಎಂದು ಸೂಚಿಸಿದರು.

    ಡಿಎಚ್‌ಒ ಡಾ.ಟಿ.ಲಿಂಗರಾಜು, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಮಹೇಶ ಎಂ.ಜಿ., ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಸವರಾಜ ಕುಂಬಾರ, ತಾಲೂಕು ಆರೋಗ್ಯಾಧಿಕಾರಿಗಳಾದ ಮಂಜುನಾಥ ಬ್ಯಾಳಹುಣಸಿ, ಆನಂದ ಗೋಟುರ, ಸಮುದಾಯ ಸಂಯೋಜಕರಾದ ಎಂ.ಬಿ. ನದಾಫ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts