More

    ಕೊಪ್ಪಳ ಉತ್ಸವ ಲೋಗೋ ಬಿಡುಗಡೆ

    ಕೊಪ್ಪಳ: ಜಿಲ್ಲಾ ರಜತ ಮಹೋತ್ಸವಕ್ಕೆ ಮಾ. 10 ಮತ್ತು 11 ರಂದು ದಿನಾಂಕ‌ ನಿಗದಿಯಾಗಿದ್ದು, ಶುಕ್ರವಾರ ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್ ಲೋಗೋ ಬಿಡುಗಡೆಗೊಳಿಸಿದರು. 

    ಕೊಪ್ಪಳ‌ ಜಿಲ್ಲೆಯಾಗಿ 25 ವರ್ಷಗಳಾಗಿದ್ದು, ರಜತ ಮಹೋತ್ಸವ ಆಚರಣೆಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಹಲವು ಸುತ್ತಿನ ಸಭೆಗಳಾಗಿದ್ದು, ಉತ್ಸವ ಯಶಸ್ಸಿಗಾಗಿ 20 ಸಮಿತಿಗಳನ್ನು ರಚಿಸಲಾಗಿದೆ. ಗದಗ ರಸ್ತೆಯಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭ ಜರುಗಲಿದೆ. ತಾಲೂಕು ಕ್ರೀಡಾಂಗಣದಲ್ಲಿ ವಿವಿಧ ಸ್ಟಾಲ್ ಗಳ ಪ್ರದರ್ಶನ ಇರಲಿದ್ದು, ಸಾಹಿತ್ಯ ಭವನದಲ್ಲಿ ವಿವಿಧ ಗೋಷ್ಠಿಗಳು ನಡೆಯಲಿವೆ.

    ಪ್ರವಾಸೋದ್ಯಮ ಇಲಾಖೆತಲಯಿಂದ 50 ಲಕ್ಷ ರೂ.‌ಅನುದಾನ ಬಿಡುಗಡೆಯಾಗಿದ್ದು, ಉಳಿದಂತೆ ಸಿಎಸ್ಆರ್ ಇನ್ನಿತರ ಮೂಲಗಳಿಂದ ಅನುದಾನ ಹೊಂದಿಸಿರುವುದಾಗಿ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಮಾಹಿತಿ ನೀಡಿದರು. ಸಂಸದ ಸಂಗಣ್ಣ ಕರಡಿ, ಶಾಸಕರಾದ ಪರಣ್ಣ ಮುನವಳ್ಳಿ, ರಾಘವೇಂದ್ರ ಹಿಟ್ನಾಳ್, ವಿಪ ಸದಸ್ಯೆ ಹೇಮಲತಾ ನಾಯಕ, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಡಿಸಿ ಸಾವಿತ್ರಿ ಕಡಿ‌ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts