More

    ಕೊಪ್ಪಳ ಜಿಲ್ಲೆಯಲ್ಲಿ ಶಾಲೆಗಳ ಅದ್ದೂರಿ ಆರಂಭ


    ಕೊಪ್ಪಳ: ಜಿಲ್ಲೆಯ ಶಾಲೆಗಳಲ್ಲಿ ಸೋಮವಾರ ಮಕ್ಕಳ ಕಲರವ ಜೋರಾಗಿತ್ತು. ಒಂದರಿಂದ ಐದರವರೆಗೆ ಭೌತಿಕ ತರಗತಿಗಳು ಆರಂಭವಾಗಿದ್ದು, ವಿವಿಧೆಡೆ ಶಿಕ್ಷಕರು ಹೂ ಮಳೆ ಸುರಿಸಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು.ಕೆಲವೆಡೆ ಡೊಳ್ಳು ಬಾರಿಸುವ ಮೂಲಕ ಸ್ವಾಗತ ಕೋರಲಾಯಿತು.

    ಶಾಲೆಗಳಲ್ಲಿ ಹಬ್ಬದ ವಾತಾವರಣ ಕಂಡುಬಂತು. ಕೆಲವೆಡೆ ತಳಿರು, ತೋರಣಗಳಿಂದ ಸಿಂಗರಿಸಲಾಗಿತ್ತು. ಜಿಲ್ಲೆಯಲ್ಲಿ 1ರಿಂದ 5 ನೇ ತರಗತಿಗೆ 79712 ಬಾಲಕರು, 74345 ಬಾಲಕಿಯರು ಪ್ರವೇಶ ಪಡೆದಿದ್ದಾರೆ. ಮೊದಲ ದಿನ ಬಹುತೇಕ ವಿದ್ಯಾರ್ಥಿಗಳು ಹಾಜರಾದರು. ಆರನೇ ತರಗತಿ ಮೇಲ್ಪಟ್ಟು ಶಾಲೆ, ಕಾಲೇಜುಗಳು ಆರಂಭವಾಗಿರುವುದರಿಂದ ಪಾಲಕರು ಮಕ್ಕಳನ್ನು ನಿರಾತಂಕವಾಗಿ ಶಾಲೆಗೆ ಕಳುಹಿಸಿದರು. ಬಿಸಿಯೂಟ ಆರಂಭವಾಗಿರುವುದರಿಂದ ಹಾಜರಾತಿಯೂ ಉತ್ತಮವಾಗಿತ್ತು.

    ಹಾಜರಾತಿ ಕಡ್ಡಾಯವಲ್ಲದ ಕಾರಣಕ್ಕೆ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು. ಇಲಾಖೆ ಸೂಚನೆಯಂತೆ ಶಿಕ್ಷಕರು ವಿದ್ಯಾರ್ಥಿಗಳ ಸ್ವಾಗತಕ್ಕೆ ಸಕಲ ಸಿದ್ಧತೆ ಕೈಗೊಂಡಿದ್ದರು. ಮಕ್ಕಳಿಗೆ ಕೋವಿಡ್ ನಿಯಮ ಪಾಲನೆ ಬಗ್ಗೆ ಮಾಹಿತಿ ನೀಡಿದರು.

    ಕೊಪ್ಪಳ ಜಿಲ್ಲೆಯಲ್ಲಿ ಶಾಲೆಗಳ ಅದ್ದೂರಿ ಆರಂಭ
    ಕೊಪ್ಪಳ ಜಿಲ್ಲೆಯಲ್ಲಿ ಶಾಲೆಗಳ ಅದ್ದೂರಿ ಆರಂಭ
    ಕೊಪ್ಪಳ ಜಿಲ್ಲೆಯಲ್ಲಿ ಶಾಲೆಗಳ ಅದ್ದೂರಿ ಆರಂಭ
    ಕೊಪ್ಪಳ ಜಿಲ್ಲೆಯಲ್ಲಿ ಶಾಲೆಗಳ ಅದ್ದೂರಿ ಆರಂಭ
    ಕೊಪ್ಪಳ ಜಿಲ್ಲೆಯಲ್ಲಿ ಶಾಲೆಗಳ ಅದ್ದೂರಿ ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts