More

    ಸಿಂಗಟಾಲೂರು ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಿ: ಹೋರಾಟ ಸಮಿತಿ ಅಧ್ಯಕ್ಷ ಶರಣಪ್ಪ ಜಡಿ ಒತ್ತಾಯ

    ಕೊಪ್ಪಳ: ಅಳವಂಡಿ ಭಾಗಕ್ಕೆ ನೀರಾವರಿ ಕಲ್ಪಿಸುವ ಸಿಂಗಟಾಲೂರು ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವುದಾಗಿ ಸರ್ಕಾರ ಭರವಸೆ ನೀಡಿದ್ದು, ಚುನಾವಣೆ ಘೋಷಣೆಯಾಗುವ ಮೊದಲು ಕಾರ್ಯಾರಂಭ ಮಾಡುವಂತೆ ಸಿಂಗಟಾಲೂರು ಏತ ನೀರಾವರಿ ಯೋಜನೆ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ ಶರಣಪ್ಪ ಜಡಿ ಹೇಳಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 1992ರಲ್ಲಿ ಯೋಜನೆಗೆ ಚಾಲನೆ ದೊರೆತಿದ್ದು, ಈವರೆಗೂ ಅನುಷ್ಠಾನವಾಗಿಲ್ಲ. ಯೋಜನೆ ಬಲಭಾಗ ನೀರಾವರಿಯಾಗಿ 10 ವರ್ಷ ಕಳೆದಿದೆ. 2016ರಲ್ಲಿ ಯೋಜನೆಯನ್ನು ಸೂಕ್ಷ್ಮ ನೀರಾವರಿಯಾಗಿ ಮಾಡಲಾಗಿದೆ. ಇದೀಗ ಮಧ್ಯಪ್ರದೇಶ ಮಾದರಿಯಲ್ಲಿ ಅನುಷ್ಠಾನಗೊಳಿಸುವುದಾಗಿ ಸಿಎಂ ತಿಳಿಸಿದ್ದಾರೆ. ಆದರೆ ಕಾರ್ಯಾರಂಭ ಮಾಡುತ್ತಿಲ್ಲ. ಹೀಗಾಗಿ ಫೆ.14ರಂದು ಸಿಎಂ ಬಳಿ ನಿಯೋಗ ತೆಗೆದುಕೊಂಡು ಹೋಗಿ ಒತ್ತಾಯಿಸಲಾಗುವುದು. ಜತೆಗೆ ಕಲ್ಲಳ್ಳಿ ಆಂಜನೇಯ ಏತ ನೀರಾವರಿ ಯೋಜನೆ ಆರಂಭಿಸುವಂತೆ ಮನವಿ ಸಲ್ಲಿಸಿದ್ದು, ಅದನ್ನು ಆರಂಭಿಸಬೇಕಿದೆ. ಅಧಿಕಾರಿಗಳು ಯೋಜನೆ ಸರ್ವೇ ನಡೆಸಲು ಅನುದಾನ ಕೋರಿ ಸಣ್ಣ ನೀರಾವರಿ ಇಲಾಖೆಗೆ ಪತ್ರ ಬರೆದಿದ್ದಾರೆ. ಸರ್ಕಾರ ಅನುದಾನ ಒದಗಿಸಬೇಕಿದೆ ಎಂದರು.

    ಯಾವ ಮಾದರಿಯಲ್ಲಾದರೂ ಯೋಜನೆ ಅನುಷ್ಠಾನಗೊಳಿಸಲಿ. ಒಟ್ಟಿನಲ್ಲಿ ರೈತರ ಹೊಲಗಳಿಗೆ ನೀರು ನೀಡಬೇಕು. ಕಲ್ಲಳ್ಳಿ ಏತ ನೀರಾವರಿ ಯೋಜನೆಯಡಿ ಹತ್ತು ಗ್ರಾಮಗಳು ಒಳಪಡಲಿದ್ದು, 5000 ಎಕರೆ ನೀರಾವರಿಯಾಗಲಿದೆ. ಶೀಘ್ರ ಯೋಜನೆ ಜಾರಿ ಮಾಡದಿದ್ದಲ್ಲಿ ನಿರಂತರ ಹೋರಾಟ ಹಮ್ಮಿಕೊಳ್ಳಲು ಗ್ರಾಮಸ್ಥರು ನಿರ್ಧರಿಸಿದ್ದೇವೆಂದು ತಿಳಿಸಿದರು. ಗ್ರಾಮಸ್ಥರಾದ ನಾಗಪ್ಪ ಸವಡಿ, ಚಿಕ್ಕವೀರಪ್ಪ ಕವಡಿಮಟ್ಟಿ, ಜಗನ್ನಾಥರಡ್ಡಿ ದಾಸರಡ್ಡಿ, ಸಿದ್ದಣ್ಣ ಕೋರಿಶೆಟ್ಟರ್, ದೇವಪ್ಪ ಕಟ್ಟಿಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts