More

    ರೈಲ್ವೆ ಖಾಸಗೀಕರಣ ಬೇಡ: ಕೊಪ್ಪಳದಲ್ಲಿ ನಿರುದ್ಯೋಗಿ ಯುವಜನರ ಹೋರಾಟ ಸಮಿತಿ ಪ್ರತಿಭಟನೆ

    ಕೊಪ್ಪಳ: ರೈಲ್ವೆ ಖಾಸಗೀಕರಣ ನಿಲ್ಲಿಸಿ ಯುವಕರಿಗೆ ಉದ್ಯೋಗ ಕಲ್ಪಿಸಬೇಕೆಂದು ಒತ್ತಾಯಿಸಿ ಅಖಿಲ ಭಾರತ ನಿರುದ್ಯೋಗಿ ಯುವಜನರ ಹೋರಾಟ ಸಮಿತಿ ಜಿಲ್ಲಾ ಪದಾಧಿಕಾರಿಗಳು ಶುಕ್ರವಾರ ನಗರದ ರೈಲ್ವೆ ನಿಲ್ದಾಣ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

    ದೇಶದಲ್ಲಿ ನಿರುದ್ಯೋಗ ಸಾಂಕ್ರಾಮಿಕ ರೋಗದಂತೆ ಹರಡಿದೆ. 45 ಕೋಟಿ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಉದ್ಯೋಗ ಸೃಷ್ಟಿಸುವ ಬದಲು ಸಾರ್ವಜನಿಕ ಆಸ್ತಿಗಳನ್ನು ಖಾಸಗೀಕರಣಗೊಳಿಸಲಾಗುತ್ತಿದೆ. ವಿವಿಧ ಇಲಾಖೆಯಲ್ಲಿನ ಲಕ್ಷಾಂತರ ಹುದ್ದೆಗಳನ್ನು ನಾಶಪಡಿಸಲಾಗುತ್ತಿದೆ. ರೈಲ್ವೆ ಇಲಾಖೆಯೊಂದರಲ್ಲೇ 90 ಸಾವಿರ ಹುದ್ದೆಗಳನ್ನು ರದ್ದುಪಡಿಸಲಾಗಿದೆ. ಇಂದಿಗೂ ರೈಲ್ವೆ ಜನಸಾಮಾನ್ಯರ ಪ್ರಯಾಣಕ್ಕೆ ಅನುಕೂಲಕರವಾಗಿದೆ. ಅತಿಹೆಚ್ಚು ಉದ್ಯೋಗ ಸೃಷ್ಟಿಗೂ ಕಾರಣವಾಗಿದೆ. ಆದರೆ, ಖಾಸಗಿ ಕಂಪನಿಗಳ ಹಿತ ಕಾಯಲು ಇಲಾಖೆಯನ್ನು ಖಾಸಗೀಕರಣ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

    ರೈಲ್ವೆ ಇಲಾಖೆಯಲ್ಲಿ 90 ಸಾವಿರ ಹುದ್ದೆ ರದ್ದತಿ ನಿರ್ಧಾರ ಕೈ ಬಿಡಬೇಕು. ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. ಸಾರ್ವಜನಿಕ ಆಸ್ತಿಗಳ ಖಾಸಗೀಕರಣ ಕೈಬಿಡಬೇಕು. ಹೆಚ್ಚು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕೆಂದು ಆಗ್ರಹಿಸಿದರು. ಸಮಿತಿ ಮುಖಂಡರಾದ ಶರಣು ಗಡ್ಡಿ, ಶರಣು ಪಾಟೀಲ್, ರಮೇಶ ವಕಲಕುಂಟಿ, ರೋಹಿತ್, ರವಿ, ಶರಣಪ್ಪ, ಸಂದೀಪ ಹಡಪದ, ಧರ್ಮಣ್ಣ, ಸಂಗಮೇಶ, ಸಮೀರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts