More

    ಸ್ವಂತ ಉದ್ಯೋಗದ ಮೂಲಕ ಸಬಲರಾಗಿ

    ಕೊಪ್ಪಳ: ಅಂಗವಿಕಲರು ಸ್ವಂತ ಉದ್ಯೋಗದ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಕೇಂದ್ರದ ನಿರ್ದೇಶಕ ಐಯಪ್ಪ ಮಾಲಗಿತ್ತಿ ಹೇಳಿದರು.

    ನಗರದ ಕುಷ್ಟಗಿ ರಸ್ತೆಯ ಸಮೂಹ ಸಾಮರ್ಥ್ಯ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ಅಂಗವಿಕಲರ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಕೇಂದ್ರದಲ್ಲಿ 10 ದಿನ ಉಚಿತ ಊಟ ಹಾಗೂ ವಸತಿಯೊಂದಿಗೆ ಹಲವು ಬಗೆಯ ಉದ್ಯೋಗ ತರಬೇತಿ ನೀಡಲಾಗುವುದು. ಅಂಗವಿಕಲರು ಯೋಜನೆಯ ಸದುಪಯೋಗ ಪಡೆದುಕೊಂಡು ಯಾರ ಮೇಲೆಯೂ ಅವಲಂಬಿತರಾಗದೆ ಜೀವನ ರೂಪಿಸಿಕೊಳ್ಳಬೇಕು ಎಂದರು.

    ಸಾಮರ್ಥ್ಯ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕ ಎಚ್.ಎನ್.ಬಸಪ್ಪ ಮಾತನಾಡಿ, ಕೋವಿಡ್ ಸಂಕಷ್ಟದಲ್ಲಿ ಸಂಸ್ಥೆಯು ದಾನಿಗಳ ನೆರವಿನಿಂದ ಅಂಗವಿಕಲರು ಹಾಗೂ ಆರೈಕೆದಾರರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸುತ್ತಿದೆ ಎಂದರು. ಸಂಸ್ಥೆಯ ನಿರ್ದೇಶಕ ಬಿ.ಹಂಪಣ್ಣ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಕೇಂದ್ರದ ತರಬೇತುದಾರ ಲಕ್ಷ್ಮೀಕಾಂತ, ಸಿಬ್ಬಂದಿ ವಿರೂಪಾಕ್ಷಿ ಅಳವಂಡಿ, ಮಂಜಪ್ಪ, ಪ್ರಸಾದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts