More

    ತಿಂಗಳಾಂತ್ಯಕ್ಕೆ ಕೊಪ್ಪಳದಲ್ಲಿ ಕರೊನಾ ಲ್ಯಾಬ್ ಆರಂಭ

    ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ | ಪರಿಸ್ಥಿತಿ ನಿಯಂತ್ರಿಸಲು ತಬ್ಲಿಘಿಗಳು ಸಹಕರಿಸುತ್ತಿಲ್ಲ

    ಕೊಪ್ಪಳ: ಜಿಲ್ಲೆಯಲ್ಲಿ ಈವರೆಗೂ ಕರೊನಾ ಪ್ರಕರಣಗಳು ಕಾಣಿಸಿಕೊಂಡಿಲ್ಲ. ಇದೇ ಪರಿಸ್ಥಿತಿಯನ್ನು ಮುಂದುವರಿಸಲಾಗುವುದು. ಈ ತಿಂಗಳಾಂತ್ಯಕ್ಕೆ ಕರೊನಾ ಪರೀಕ್ಷಾ ಪ್ರಯೋಗಾಲಯ ಆರಂಭಿಸಲಾಗುವುದೆಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

    ಈಗಾಗಲೇ ಪಿಪಿಇ ಕಿಟ್ಸ್ ಬಂದಿವೆ. ಈ ತಿಂಗಳಾಂತ್ಯಕ್ಕೆ ಕರೊನಾ ಪರೀಕ್ಷೆಯ ಲ್ಯಾಬ್ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಕರೊನಾ ಪರಿಸ್ಥಿತಿ ನಿಯಂತ್ರಿಸಲು ತಬ್ಲಿಘಿಗಳು ಸಹಕರಿಸುತ್ತಿಲ್ಲ. ಅವರು ಹೇಳಿಕೊಂಡರೆ ಸಮಸ್ಯೆ ಬಗೆಹರಿಯುತ್ತದೆ. ಸದ್ಯ ಟೆಸ್ಟಿಂಗ್ ಪ್ರಮಾಣ ಹೆಚ್ಚಿಸಲಾಗಿದೆ. ಮುಂದೆ ಪಾಸಿಟಿವ್ ಪ್ರಮಾಣ ನೋಡಿಕೊಂಡು ಲಾಕ್‌ಡೌನ್ ಅವಧಿ ವಿಸ್ತರಣೆ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಗಂಗಾವತಿ, ಕಾರಟಗಿ ಭಾಗದಲ್ಲಿ ಮಳೆಯಿಂದ ಬೆಳೆ ಹಾನಿಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಸಿಎಂಗೆ ವರದಿ ಸಲ್ಲಿಸಿದ್ದು, 45 ಕೋಟಿ ರೂ. ಪರಿಹಾರ ಘೋಷಣೆಯಾಗಿದೆ. ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ ಪರಿಹಾರ ವಿತರಿಸಲಾಗುವುದು. 5 ವರ್ಷದ ಹಿಂದಿನ ಪರಿಸ್ಥಿತಿ ಬೇರೆ. ಸದ್ಯದ ಪರಿಸ್ಥಿತಿ ಬೇರೆ. ಇದರಲ್ಲಿ ಯಾವುದೇ ಡೋಂಗಿತನವಿಲ್ಲ. ಅದರ ಅರ್ಥ ನಮಗೆ ಗೊತ್ತಿಲ್ಲ. ನಮ್ಮದೇನಿದ್ದರೂ ನೇರ ರಾಜಕಾರಣ ಎಂದು ವಿಪಕ್ಷಗಳ ಟೀಕೆಗೆ ಟಾಂಗ್ ನೀಡಿದರು.

    ನಾನು ಜಿಲ್ಲೆಗೆ ಪಿಕ್‌ನಿಕ್‌ಗಾಗಿ ಬಂದಿರಲಿಲ್ಲ. ರೈತರ ಪರ ಕೆಲಸಕ್ಕೆ ಬಂದಿದ್ದೆ. ಆ ಬಗ್ಗೆ ಡಿಸಿಯವರನ್ನು ಪ್ರಶ್ನಿಸಿದ್ದೇನೆ. ಅದಕ್ಕವರು ಉತ್ತರ ನೀಡಿದ್ದಾರೆ. ಅದರಲ್ಲಿ ಬೇರೇನು ಇಲ್ಲವೆಂದು ಜಿಲ್ಲಾಧಕಾರಿ ವಿರುದ್ಧ ಹರಿಹಾಯ್ದ ಬಗ್ಗೆ ಸ್ಪಷ್ಟನೆ ನೀಡಿದರು. ಶಾಸಕ ಹಾಲಪ್ಪ ಆಚಾರ್, ಜಿಪಂ ಅಧ್ಯಕ್ಷ ವಿಶ್ವನಾಥ ರಡ್ಡಿ, ಮುಖಂಡರಾದ ಅಂಬರೀಷ್ ಕುಳಗಿ, ಅಮರೇಶ ಕರಡಿ ಇದ್ದರು.

    ಮಧ್ಯವರ್ತಿಗಳ ಹಾವಳಿ ತಪ್ಪಲು ಕ್ರಮ: ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಕೃಷಿ ಚಟುವಟಿಕೆಗಳು, ರೈತರ ಸಮಸ್ಯೆಗಳನ್ನು ಖುದ್ದು ಆಲಿಸಿದ್ದೇನೆ. ರೈತರು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸರ್ಕಾರ ರೈತರಿಗೆ ಬೇಕಾದ ಎಲ್ಲ ಅನುಕೂಲಗಳನ್ನು ಮಾಡಿದೆ. ಸದ್ಯ ಕೃಷಿ ಚಟುವಟಿಕೆಗಳಿಗೆ ಯಾವುದೇ ನಿಬರ್ಂಧವಿಲ್ಲ. ಕೆಲವು ಕಡೆ ರೈತರು ಆನ್‌ಲೈನ್ ಟ್ರೇಡಿಂಗ್ ಆರಂಭಿಸಿದ್ದಾರೆ. ದಳ್ಳಾಳಿಗಳ ಮಧ್ಯವರ್ತಿಗಳ ಹಾವಳಿ ತಪ್ಪಲು ಕ್ರಮಕೈಗೊಳ್ಳಲಾಗಿದೆ. ರೈತರು ನೇರವಾಗಿ ಗ್ರಾಹಕರಿಗೆ ತಮ್ಮ ಬೆಳೆ ಮಾರಾಟ ಮಾಡಬಹುದು ಎಂದರು.

    ಗವಿಮಠಕ್ಕೆ ಭೇಟಿ : ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ನಂತರ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಸಚಿವರು ಗವಿಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಕೋಳೂರು ಗ್ರಾಮದಲ್ಲಿ ರೈತರನ್ನು ಭೇಟಿಯಾಗಿ ಕರೊನಾ ಬಗ್ಗೆ ಜಾಗೃತಿಯಿಂದ ಇರುವಂತೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts