More

    ಬಹದ್ದೂರಬಂಡಿಯಲ್ಲಿ ಬಂಜಾರ ಹೋಳಿ ಉತ್ಸವ ನಾಳೆ

    ಕೊಪ್ಪಳ: ಬಂಜಾರ ಸಮುದಾಯದ ರಾಷ್ಟ್ರೀಯ ಹೋಳಿ ಉತ್ಸವ ಹಾಗೂ ಸಂತ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವವನ್ನು ಮಾ.6ರಂದು ಬಹದ್ದೂರಬಂಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದು, ಸಮುದಾಯದ ಸಾವಿರಾರು ಜನರು ದೇಶದ ವಿವಿಧೆಡೆಯಿಂದ ಆಗಮಿಸಲಿದ್ದಾರೆಂದು ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ಭರತ್ ನಾಯ್ಕ ತಿಳಿಸಿದರು.

    ಬಹದ್ದೂರ ಬಂಡಿಯಲ್ಲಿ ಹಾತೀರಾಮ್ ಬಾವಾಜಿ ಕಟ್ಟೆ ಇದ್ದು, ನಮ್ಮ ಸಮುದಾಯದವರಿಗೆ ಪವಿತ್ರ ಸ್ಥಾನವಾಗಿದೆ. ಹೋಳಿ ಹಬ್ಬದ ನಂತರ ಸಮುದಾಯದಲ್ಲಿ ಮದುವೆ ಸೇರಿ ಇತರ ಶುಭ ಕಾರ್ಯಕ್ರಮಗಳು ಜರುಗುತ್ತವೆ. ಹೀಗಾಗಿ ಈ ದಿನ ನಮಗೆ ವಿಶೇಷವಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಕಾರ್ಯಕ್ರಮ ಜರುಗಲಿದೆ. ಮಾ.6ರ ಬೆಳಗ್ಗೆ 10 ಗಂಟೆಗೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ಸೇವಾಲಾಲ್ ಜಯಂತಿ ಇರಲಿದೆ. ಬಳಿಕ ಕೊಪ್ಪಳದಿಂದ ಬಹದ್ದೂರಬಂಡಿವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಸಂಜೆ ಬಹದ್ದೂರಬಂಡಿಯಲ್ಲಿ ರಾಷ್ಟ್ರೀಯ ಹೋಳಿ ಉತ್ಸವ ಇರಲಿದ್ದು, ಸಮುದಾಯದ ಧರ್ಮಗುರುಗಳು ಸಾನ್ನಿಧ್ಯವಹಿಸಲಿದ್ದಾರೆ. ಸಚಿವ ಪ್ರಭು ಚವ್ಹಾಣ್, ಸಂಸದರಾದ ಸಂಗಣ್ಣ ಕರಡಿ, ಉಮೇಶ ಜಾಧವ್, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಭಾಗವಹಿಸುವರು. ರಾಜಸ್ಥಾನ, ಗೋವಾ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಿಂದ 30-40 ಸಾವಿರ ಜನ ಭಾಗವಹಿಸಲಿದ್ದಾರೆಂದು ಮಾಹಿತಿ ನೀಡಿದರು. ಸಮುದಾಯ ಮುಖಂಡರಾದ ಪಿ.ಲಕ್ಷ್ಮಣ, ಪಂಪಣ್ಣ ನಾಯಕ, ಪರಸಪ್ಪ ರಾಠೋಡ್,ಪರಸಪ್ಪ ಮಡ್ಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts