More

    ಬರಹಗಾರನಿಗೆ ಇರಲಿ ಸಾಮಾಜಿಕ ಬದ್ಧತೆ: ಸಾಹಿತಿ ಬರಗೂರು ರಾಮಚಂದ್ರಪ್ಪ ಸಲಹೆ

    ಕೊಪ್ಪಳ: ಸಮಾಜ ಬದಲಾವಣೆ ಬಯಸುವ ಜನ ನಾವು. ವ್ಯಕ್ತಿಗಳ ಬದಲಾವಣೆ ಕಾಲದಲ್ಲಿದ್ದೇವೆ. ಸೈದ್ಧಾಂತಿಕ ನೆಲೆಯಿಂದ ಸಮಯಸಾಧಕರ ಕೈಗೊಂಬೆಯಾಗಿದ್ದೇವೆ. ಈ ಹಂತದಲ್ಲಿ ಸಾಮಾಜಿಕ ಪ್ರಜ್ಞೆ ಕಳೆದುಕೊಂಡರೆ ಕಳೆದು ಹೋಗುತ್ತೇವೆಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾರ್ಮಿಕವಾಗಿ ನುಡಿದರು.

    ತಾಲೂಕಿನ ಭಾಗ್ಯನಗರದಲ್ಲಿ ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘ ಹಾಗೂ ಶಕ್ತಿ ಶಾರದೆ ಬೆಳಕು ಪ್ರಕಾಶನದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೆಟ್ಟದೂರು ಅಲ್ಲಮ ಹಾಗೂ ಅನಿಮಲ್ ಫಾರ್ಮ್ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಭೂತ ಅಥವಾ ವರ್ತಮಾನವನ್ನು ದಾಖಲಿಸುವುದು ಚರಿತ್ರೆಯಲ್ಲ. ಎರಡನ್ನೂ ಅರ್ಥೈಸಿಕೊಳ್ಳಬೇಕು. ಲೇಖಕ ತ್ರಿಕಾಲ ಜ್ಞಾನಿಯಾಗಿರಬೇಕು. ಹೊಡಿ, ಬಡಿ, ಕಡಿ, ಹಿಂಸೆ ಬಂಡಾಯವಲ್ಲ. ಆದರೆ, ಇಂದು ಮಾತು ಮಲಿನವಾಗುತ್ತಿದೆ. ಸಮಾನತೆ, ಮಾನವೀಯತೆ ಇಲ್ಲದ ಮಾತು ಮಲಿನತೆಗೆ ಸಮಾನ. ಇಂದು ಪ್ರಜಾಪ್ರಭುತ್ವದಲ್ಲಿ ಕಿವಿಗಿಂತ ನಾಲಿಗೆ ದೊಡ್ಡದಾಗಿದೆ. ಭಾಷಿಕ ಭ್ರಷ್ಟಾಚಾರ ನಡೆಯುತ್ತಿದೆ. ಮತ ಪ್ರಭುತ್ವವಾಗಿ ರೂಪಾಂತರಗೊಂಡಿದೆ. ವೋಟು ಎಲ್ಲದಕ್ಕೂ ಮಾನದಂಡವಲ್ಲ. ಬರಹಗಾರನಿಗೆ ಸಾಮಾಜಿಕ ಬದ್ಧತೆ, ಜವಾಬ್ದಾರಿ ಬೇಕು. ಅದನ್ನು ನಾವು ಮುಂದುವರಿಸಬೇಕು. ಜನರಿಗೆ ಜವಾಬ್ದಾರರಾಗಿರಬೇಕು. ಮನುಷ್ಯ ಸಂಬಂಧ ಮುಖ್ಯ. ನಂತರ ಸಿದ್ಧಾಂತ. ಕೆಟ್ಟದ್ದಕ್ಕೆ ಮುಖಾಮುಖಿಯಾಗಬೇಕು. ಪರಂಪರೆಗೆ ಅನುಸಂಧಾನ ನಡೆಸಬೇಕು. ಯಾವುದೇ ಧರ್ಮದವರಿರಲಿ ಮನುಷ್ಯತ್ವ ಬೇಕು. ಗಾಂಧಿ, ವಿವೇಕಾನಂದರ ಹಿಂದು ಧರ್ಮ, ಪೈಗಂಬರನ ಇಸ್ಲಾಂ ಧರ್ಮ ನನಗೆ ಬೇಕಿದೆ. ಅಲ್ಲಮಪ್ರಭು ಬಂಡಾಯ ಸಾಹಿತ್ಯದ ಜತೆಗೆ ಬೆಳೆದವರು ಎಂದರು.

    ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಮಾತನಾಡಿ, ಅನಿಮಲ್ ಫಾರ್ಮ್ ಅನುವಾದಿತವಾದರೂ ನಮ್ಮದೆನ್ನುವಂತಿದೆ. ಸರಳ ಭಾಷೆಯಾಗಿದೆ. 1945ರಲ್ಲಿ ರಚಿತವಾದ ಈ ಕೃತಿ ಇಂದಿಗೂ ಪ್ರಸ್ತುತವಾಗಿದೆ. 164 ಪುಟಗಳ ಕಾದಂಬರಿಯಲ್ಲಿ ಇಡೀ ರಾಜಕೀಯ ವ್ಯವಸ್ಥೆಯನ್ನು ತೆರೆದಿಡುತ್ತದೆ ಎಂದರು. ಉದ್ಯಮಿ ಶ್ರೀನಿವಾಸ ಗುಪ್ತಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು. ರಾಜ್ಯೋತ್ಸವ ಪುರಸ್ಕೃತ ಸಾಹಿತಿ ಎಚ್.ಎಸ್.ಪಾಟೀಲ್, ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಬೆಟ್ಟದೂರು ಅಲ್ಲಮ ಕೃತಿ ಲೇಖಕ ಸಿ.ಬಿ.ಚಿಲ್ಕರಾಗಿ, ಅನಿಮಲ್ ಫಾರ್ಮ್ ಅನುವಾದಿತ ಕೃತಿ ಕರ್ತೃ ಈಶ್ವರ ಹತ್ತಿ, ಸಾಹಿತಿ ಡಿ.ಎಂ.ಬಡಿಗೇರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts