More

    ಕಾರ್ಗಿಲ್ ನೆನಪು ಅಜರಾಮರ ; ಮಾಜಿ ಸೈನಿಕ ಚೆನ್ನಾರಡ್ಡಿ ಹೇಳಿಕೆ

    ವಿಜಯೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನ

    ಕೊಪ್ಪಳ: ಕಾರ್ಗಿಲ್ ವಿಜಯ್ ದಿವಸ್ ನಮಗೆ ಮಹತ್ತರ ದಿನವಾಗಿದೆ ಎಂದು ಮಾಜಿ ಸೈನಿಕ ಚೆನ್ನಾರಡ್ಡಿ ಹೇಳಿದರು.

    ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಭಾನುವಾರ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಅನೇಕ ಸೈನಿಕರ ಬಲಿದಾನದಿಂದ ಕಾರ್ಗಿಲ್ ಯುದ್ಧಲ್ಲಿ ಜಯಗಳಿಸಲು ಸಾಧ್ಯವಾಯಿತು. ಶತ್ರು ಸೈನಿಕರು ನಮ್ಮ ಸೈನಿಕರ ಬಸ್‌ಗಳನ್ನು ಧ್ವಂಸ ಮಾಡಿದರು. ಅನೇಕ ಸೈನಿಕರು ಸ್ಥಳದಲ್ಲೇ ಹುತಾತ್ಮರಾದರು. ಕೊನೆಗೂ ಅವಿರತ ಪ್ರಯತ್ನದ ಫಲವಾಗಿ ಜಯ ನಮಗೆ ಒಲಿಯಿತು ಎಂದು ಕಾರ್ಗಿಲ್ ಯುದ್ಧದ ಘಟನೆಗಳನ್ನು ನೆನಪಿಸಿಕೊಂಡರು.

    ಸೈನಿಕ ಗುರುಬಸಯ್ಯ ಬ್ರಹ್ನನ್ಮಠ ಮಾತನಾಡಿ, ಯುದ್ಧ ಮಾಡುವಾಗ ಸೈನಿಕರನ್ನು ಊಟಮಾಡುವಾಗ ರೈತರನ್ನು ನೆನಪಿಸಿಕೊಳ್ಳಬೇಕು. ನಾವು ರೈತರಾಗಿ ನಮ್ಮ ಮಕ್ಕಳನ್ನು ರೈತರನ್ನಾಗಿ ಮಾಡಲು ಹಿಂಜರಿಯಬಾರದು. ಯುವಕರು ದೇಶ ಕಾಯಲು ಸೈನ್ಯ ಸೇರಬೇಕು. ಇಲ್ಲವೇ ಅನ್ನ ನೀಡುವ ರೈತರಾಗಿ. ನಾವು ಸೈನ್ಯ ಸೇರಿದಾಗ ಕೇವಲ 900 ರೂ. ಸಂಬಳವಿತ್ತೆಂದು ತಮ್ಮ ದಿನಗಳನ್ನು ನೆನೆದರು.

    ಭೀಮು ಹೊರಪೇಟೆ, ಅಖೀಲ್ ಯತ್ನಳ್ಳಿ ಮಾತನಾಡಿದರು. ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ವೆಂಕಟೇಶಕಂಚಿ, ಕವಿತಾಹಮ್ಮಗಿ, ಲಕ್ಷ್ಮಿ ಅಂಬಳಿಯನ್ನು ಸನ್ಮಾನಿಸಲಾಯಿತು. ಮುಖಂಡರಾದ ವೀರೇಶ ಸಜ್ಜನ, ಶರಣಪ್ಪ ಮತ್ತೂರ ,ಶರಣ್ಣಯ್ಯ ಮುಂಡರಗಿಮಠ, ಭೀಮಣ್ಣ ಕವಲೂರು, ಬಸವರೆಡ್ಡಿ, ವೀರೇಶ ಬಳಿಗಾರ, ಶಶಾಂಕ, ಶಿವಪ್ರಸಾದ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts