More

    ಸೀಟಿಗಾಗಿ ಮಕ್ಕಳನ್ನು ಕಿಟಕಿ ಮೂಲಕ ತೂರಿದ ಭಕ್ತರು

    ಕೊಪ್ಪಳ: ಸೋಮವಾರ ಹುಣ್ಣಿಮೆ ಅಂಗವಾಗಿ ತಾಲೂಕಿನ ಹುಲಗಿ ಗ್ರಾಮದ ಹುಲಿಗೆಮ್ಮ ದೇವಿ ದರ್ಶನಕ್ಕೆ ವಿವಿಧ ರಾಜ್ಯದಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ. ಇಂದು ಮಂಗಳವಾರ ಕಾರಣ ಭಕ್ತರ ಸಂಖ್ಯೆ ಕಡಿಮೆ ಆಗಿಲ್ಲ. ಊರಿಗೆ ತೆರಳಲು ಬಸ್ ಇಲ್ಲದೆ ಪರದಾಡುತ್ತಿದ್ದಾರೆ. ಬಂದ ಬಸ್ ಗೆ ಸೀಟು ಹಿಡಿಯಲು ಮುಗಿ ಬಿದ್ದಿದ್ದು, ಕಿಟಕಿ ಮೂಲಕ ಬ್ಯಾಗುಗಳ ಜತೆ ಮಕ್ಕಳನ್ನು ತೂರುತ್ತಿದ್ದಾರೆ.

    ಹುಲಿಗೆಮ್ಮನಿಗೆ ರಾಜ್ಯ ಸೇರಿ ಮಹಾರಾಷ್ಟ್ರ, ಆಂಧ್ರ, ತೆಲಂಗಾಣ‌‌ ಸೇರಿ ಉತ್ತರ ಭಾರತದ ಇತರ ರಾಜ್ಯದಲ್ಲಿ ಲಕ್ಷಾಂತರ ಭಕ್ತರಿದ್ದಾರೆ. ಸಾಮಾನ್ಯವಾಗಿ ಹುಣ್ಣಿಮೆ, ಮಂಗಳವಾರ ಮತ್ತು ಶುಕ್ರವಾರ ಅಧಿಕ ಭಕ್ತರು ಭೇಟಿ ನೀಡುತ್ತಾರೆ.

    ಸೋಮವಾರ ಗೌರಿ ಹುಣ್ಣಿಮೆ ಅಂಗವಾಗಿ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ. ಇಂದು ಮಂಗಳವಾರ ಕಾರಣ ಭಕ್ತರ ಸಂಖ್ಯೆ ದುಪ್ಪಟ್ಟಾಗಿದೆ. ಭಕ್ತರು ಹೋಗಿ ಬರಲು ಬಸ್ ಕೊರತೆಯಾಗುತ್ತಿವೆ.

    ಬಂದ ಬಸ್ ನಲ್ಲಿ ಸೀಟು ಹಿಡಿಯಲು ಮುಗಿ ಬೀಳುತ್ತಿದ್ದಾರೆ. ಕಿಟಕಿ ಮೂಲಕ ಬ್ಯಾಗ್, ಕರವಸ್ತ್ರ ಜತೆಗೆ ಪುಟ್ಟ ಮಕ್ಕಳನ್ನು ತೂರಿಸುತ್ತಿದ್ದಾರೆ. ಇನ್ನು ಬಸ್ ಶಕ್ತಿಮೀರಿ ಪ್ರಯಾಣಿಕರು ತುಂಬುತ್ತಿದ್ದು, ಅಪಾಯ ತಂದೊಡ್ಡುವಂತಿದೆ.

    ಮೊದಲಿನಿಂದಲೂ‌ ಜಿಲ್ಲೆಯ ಧಾರ್ಮಿಕ ಸ್ಥಳಗಳಿಗೆ ಭಕ್ತರ ಸಂಖ್ಯೆ ಅಧಿಕವಾಗಿಯೇ ಇದೆ. ಶಕ್ತಿ ಯೋಜನೆ ಆರಂಭವಾದಾಗಿನಿಂದ ಸಂಖ್ಯೆ ದುಪ್ಪಟ್ಟಾಗಿದ್ದು, ಮೂಲ‌ ಸೌಕರ್ಯಗಳ ಕೊರತೆ ಕಾಡುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts