More

    ಹಿರೇಹಳ್ಳದ ಮರಳುಗಾರಿಕೆ ಟೆಂಡರ್ ರದ್ದುಪಡಿಸಿ: ಹಿರೇಸಿಂದೋಗಿಯಲ್ಲಿ ವಿವಿಧ ಗ್ರಾಮಗಳ ಜನರ ಪ್ರತಿಭಟನೆ

    ಕೊಪ್ಪಳ: ಹಿರೇಹಳ್ಳದಲ್ಲಿ ಮರಳುಗಾರಿಕೆ ನಡೆಸಲು ನೀಡಿರುವ ಅನುಮತಿ ರದ್ದುಪಡಿಸುವಂತೆ ಒತ್ತಾಯಿಸಿ ವಿವಿಧ ಗ್ರಾಮಗಳ ಗ್ರಾಮಸ್ಥರು ತಾಲೂಕಿನ ಹಿರೇಸಿಂದೋಗಿಯಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

    ಹಿರೇಹಳ್ಳದ ಅಕ್ಕಪಕ್ಕದ ರೈತರು ಕೃಷಿಗಾಗಿ ಹಳ್ಳ ಅವಲಂಬಿಸಿದ್ದೇವೆ. ಪಂಪ್‌ಸೆಟ್ ಮೂಲಕ ನೀರು ಬಳಿಸಿಕೊಳ್ಳುತ್ತಿದ್ದೇವೆ. ಉತ್ತಮ ಬೆಳೆ ಬರುತ್ತಿದ್ದು, ಸಾಕಷ್ಟು ಅನುಕೂಲವಾಗಿದೆ. ಕಾಟ್ರಳ್ಳಿ, ಚಿಕ್ಕ ಸಿಂದೋಗಿ, ಹಿರೇ ಸಿಂದೋಗಿ, ಬೂದಿಹಾಳ, ಗುನ್ನಳ್ಳಿ ಗ್ರಾಮದವರು ಹಳ್ಳವನ್ನೇ ಅವಲಂಬಿಸಿ ಕೃಷಿ ಮಾಡುತ್ತಿದ್ದೇವೆ. ಸರ್ಕಾರ ಹಟ್ಟಿ ಚಿನ್ನದ ಗಣಿ ಕಂಪನಿಗೆ ಹಳ್ಳದಲ್ಲಿ ಮರಳುಗಾರಿಕೆ ನಡೆಸಲು ಅನುಮತಿ ನೀಡಿದೆ. ದೊಡ್ಡ ಯಂತ್ರದ ಮೂಲಕ ಮರಳುಗಾರಿಕೆ ಮಾಡಿದಲ್ಲಿ ಹಳ್ಳದಲ್ಲಿ ನೀರು ಸಂಗ್ರಹವಾಗುವುದಿಲ್ಲ. ಅಕ್ಕಪಕ್ಕದ ಬೋರ್‌ವೆಲ್‌ಗಳಲ್ಲಿ ಅಂತರ್ಜಲಮಟ್ಟ ಕುಸಿಯುತ್ತದೆ. ನೀರು ಸಂಗ್ರಹವಾಗಲು ಕನಿಷ್ಠ ಪ್ರಮಾಣದ ಮರಳು ಹಳ್ಳದಲ್ಲಿರಬೇಕು. ಆದರೆ, ಸಂಪೂರ್ಣ ತೆಗೆಯುತ್ತಿದ್ದಾರೆ. ಅದ್ದರಿಂದ ಸರ್ಕಾರ ಮರಳುಗಾರಿಕೆ ಪರವಾನಗಿ ರದ್ದುಪಡಿಸಬೇಕು. ಅಲ್ಲಿವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದರು.

    ಬಿಕನಳ್ಳಿ ಉಜ್ಜಿನಿ ಪೀಠದ ಶಿವಲಿಂಗಾರಾಧ್ಯ ಸ್ವಾಮೀಜಿ, ಗ್ರಾಮಸ್ಥರಾದ ಶಂಕರಗೌಡ ಕುರಡಿ, ಚನ್ನಯ್ಯ ಪೊಲೀಸ್ ಪಾಟೀಲ್, ಭೀಮರಡ್ಡಿ ಹವಾಜಿ, ಈಶಪ್ಪ ಮಾದಿನೂರು, ಸಿದ್ದರಡ್ಡಿ ಕೆಂಚರಡ್ಡಿ, ದೇವೇಂದ್ರಪ್ಪ ದದೇಗಲ್, ನಿಂಗಪ್ಪ ಯತ್ನಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts