More

    ಹೆಡಗೇವಾರ ಪಠ್ಯ ಸೇರಿಸದರೆ ತಪ್ಪೇನಿದೆ ?: ಸಚಿವ ಹಾಲಪ್ಪ ಆಚಾರ್ ಪ್ರಶ್ನೆ

    ಕೊಪ್ಪಳ: ಎಸ್ಸೆಸ್ಸೆಲ್ಸಿ ಪಠ್ಯದಿಂದ ಸ್ವಾತಂತ್ರೃ ಹೋರಾಟಗಾರ ಭಗತ್ ಸಿಂಗ್ ವಿಷಯವನ್ನು ಕೈಬಿಟ್ಟಿಲ್ಲ. ಈ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಲಾಗಿದೆ. ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ ಪಠ್ಯವನ್ನು ಸೇರಿಸುವುದರಲ್ಲಿ ತಪ್ಪೇನಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಪ್ರಶ್ನಿಸಿದರು.

    ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಅವರು ಯಾವುದೇ ಒಂದು ಪಕ್ಷ, ಪಂಗಡ, ಸಮುದಾಯ ಪರವಾಗಿ ಇದ್ದವರಲ್ಲ. ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಅಂಥವರ ಪಠ್ಯ ಸೇರಿಸುವುದು ತಪ್ಪಲ್ಲ. ಕಾಂಗ್ರೆಸ್‌ನವರಿಗೆ ಆರ್‌ಎಸ್‌ಎಸ್ ಹೆಸರು ಬಳಸಿ ಟೀಕಿಸದಿದ್ದರೆ ನಿದ್ದೆ ಬರುವುದಿಲ್ಲ. ಹೀಗಾಗಿ ಯಾವಾಗಲೂ ಟೀಕಿಸುತ್ತಾರೆ. ಅದಕ್ಕೇನು ಮಾಡಲಾಗದು ಎಂದರು.

    ಜ್ಞಾನವಾಪಿ ಮಸೀದಿ ಸರ್ವೇ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ. ಅದರಂತೆ ಸಮೀಕ್ಷೆ ನಡೆದಿದೆ. ಇದರಲ್ಲಿ ಬಿಜೆಪಿ ಪಾತ್ರವೇನು ಇಲ್ಲ. ಯಾವುದೇ ಸಮುದಾಯ ಟಾರ್ಗೆಟ್ ಮಾಡುವ ಉದ್ದೇಶವಿಲ್ಲ. ನ್ಯಾಯಾಲಯಕ್ಕೆ ಯಾರಾದರೂ ಅರ್ಜಿ ಸಲ್ಲಿಸಿದಾಗ ಮಾತ್ರ ವಿಚಾರಣೆ ನಡೆಯುತ್ತದೆ. ಕೋರ್ಟ್ ತೀರ್ಪನ್ನು ಎಲ್ಲರೂ ಗೌರವಿಸಬೇಕೆಂದು ಸಮರ್ಥಿಸಿಕೊಂಡರು.

    ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದ್ದು, ಮನೆ, ಶಾಲೆಗಳಿಗೆ ನೀರು ನುಗ್ಗಿದೆ. ನಾನು ನನ್ನ ಕ್ಷೇತ್ರದ ಕೆಲ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವೆ. ಜಿಲ್ಲಾಧಿಕಾರಿಗಳಿಗೆ ಕೂಡಲೇ ಸಮೀಕ್ಷೆ ನಡೆಸಿ, ಹಾನಿ ಪ್ರಮಾಣದ ವರದಿ ಸಲ್ಲಿಸಲು ಸೂಚಿಸಿರುವೆ. ಬೆಳೆಹಾನಿ, ಆಸ್ತಿ ಹಾನಿಯಾಗಿದ್ದಲ್ಲಿ ತಕ್ಷಣ ಅವರಿಗೆ ಪರಿಹಾರ ಕೊಡಿಸಲಾಗುವುದೆಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts