More

    ಶಿಕ್ಷಣ ಪಡೆದು ಮೂಢನಂಬಿಕೆ ಅಳಿಸಿಹಾಕಿ: ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಸತೀಶ್ ಜಾರಕಿಹೊಳಿ ಕಿವಿಮಾತು

    ಕೊಪ್ಪಳ: ಮೌಢ್ಯಾಚರಣೆ ಮತ್ತು ಅನಕ್ಷರತೆಯಿಂದ ಶೋಷಣೆ ಹೆಚ್ಚುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಣವಂತರಾಗಿ ನಮ್ಮತನಕ್ಕಾಗಿ ಹೋರಾಡಬೇಕು ಎಂದು ಶಾಸಕ, ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಸತೀಶ್ ಜಾರಕಿಹೊಳಿ ಹೇಳಿದರು.

    ತಾಲೂಕಿನ ಹಟ್ಟಿ ಕ್ರಾಸ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಹುತ್ವ ಭಾರತದ ಸವಾಲುಗಳು-ಚಿಂತನಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ನಮ್ಮನ್ನು ವಿಷಕಾರಿ ಬದನೆಕಾಯಿ ತಿನ್ನಲು ಹಚ್ಚಿರುವ ಕೆಲ ಜನರು ತಾವು ಹೆಚ್ಚಿನ ಪೋಷಕಾಂಶ ಇರುವ ಕುಂಬಳಕಾಯಿಯನ್ನು ದಾನ ಪಡೆಯುವ ಮೂಲಕ ಅಲ್ಲಿಯೂ ಶೋಷಣೆ ನಡೆಸಿದ್ದಾರೆ. ಮಾನವ ಬಂಧುತ್ವ ವೇದಿಕೆ ಮೂಲಕ ಸಾವಿರಾರು ವರ್ಷಗಳಿಂದ ನಮ್ಮಲ್ಲಿ ತುಂಬಿರುವ ಸುಳ್ಳುಗಳನ್ನು ಪರಿಚಯಿಸುವ ಕೆಲಸ ನಡೆಯುತ್ತಿದೆ. ಕೇವಲ ಒಂದು ದಿನದ ಶಿಬಿರದಲ್ಲಿ ಇದು ಅರ್ಥವಾಗದು. ನಿರಂತರ ಅಧ್ಯಯನ ಅವಶ್ಯ. ವೇದಿಕೆ ಯಾವೊಂದು ಪಕ್ಷದ ಪರವಾಗಿಲ್ಲ. ಶೋಷಿತರ ಸಂಘಟನೆ. ಸಂವಿಧಾನ ಬಗ್ಗೆ ಗೌರವ ಹೊಂದಿದವರನ್ನು ಆಯ್ಕೆ ಮಾಡಿ. ದೇಶದ ಇತಿಹಾಸವನ್ನು ತಿರುಚಲಾಗುತ್ತಿದೆ ಎಂದರು.

    ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಸಂವಿಧಾನ ಸಂರಕ್ಷಣೆ ಯಾರು ಮಾಡಬೇಕು ಎಂಬ ಪ್ರಶ್ನೆ ಈಗ ಬಲವಾಗಿ ನಮ್ಮನ್ನು ಕಾಡುತ್ತಿದೆ. ನಾವೇ ಅದನ್ನು ಸಂರಕ್ಷಿಸಿಕೊಳ್ಳಬೇಕಿದೆ. ದೇಶದ ಸಂಪೂರ್ಣ ವ್ಯವಸ್ಥೆ ಖಾಸಗೀಕರಣಗೊಳಿಸುವ ಮೂಲಕ ಪರೋಕ್ಷವಾಗಿ ಸಂವಿಧಾನ ಬದಲಾವಣೆ ಮಾಡಲಾಗುತ್ತಿದೆ. ಇದೆಲ್ಲವನ್ನು ತಡೆಯಲು ನಮಗಿರುವ ಅಸ್ತ್ರ ಮತದಾನ ಮಾತ್ರ ಎಂದರು.

    ಮಾನವ ಬಂಧುತ್ವ ವೇದಿಕೆ ಜಿಲ್ಲಾಧ್ಯಕ್ಷ ಟಿ.ರತ್ನಾಕರ, ವೈ.ಎನ್.ಗೌಡರ್ ಮಾತನಾಡಿದರು. ಮುಖಂಡರಾದ ಶರಣಪ್ಪ ವಡಗೇರಿ, ರಾಮಣ್ಣ ಕಲ್ಲನವರ, ಮಂಜುನಾಥ ಗೊಂಡಬಾಳ, ಭೀಮಣ್ಣ ಹವಳೆ, ಈರಪ್ಪ ಕುಡಗುಂಟಿ, ರಮೇಶ್ ನಾಯಕ, ಅಮ್ಜದ್ ಪಟೇಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts