More

    ಅಡ್ವಾನ್ಸ್ ಲೈಫ್ ಸಪೋರ್ಟ್ ಆಂಬುಲೆನ್ಸ್‌ಗೆ ಚಾಲನೆ



    ಕೊಪ್ಪಳ: ಅತ್ಯಾಧುನಿಕ ಸೇವೆ ಒದಗಿಸುವ ಅಡ್ವಾನ್ಸ್ ಲೈಫ್ ಸಫೋರ್ಟ್ ಆಂಬುಲೆನ್ಸ್‌ಗೆ ನಗರದ ಕಿಮ್ಸ್ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಸೋಮವಾರ ಚಾಲನೆ ನೀಡಿದರು.

    ಆಂಬುಲೆನ್ಸ್‌ನನ್ನು ಸಾರ್ವಜನಿಕ ಸೇವೆಗೆ ಒದಗಿಸಿದ್ದು, ಇದರಲ್ಲಿ ವೆಂಟಿಲೇಟರ್, ಆಕ್ಸಿಜನ್ ವ್ಯವಸ್ಥೆ, ಶಾರ್ಟ್ ಟ್ರೀಟ್ಮೆಂಟ್ ಸೇರಿ ಹಲವು ಸೌಲಭ್ಯಗಳಿವೆ. ವಾಹನ ನಿರ್ವಹಣೆಗೆ ಇಬ್ಬರು ಇಎಂಟಿ (ಎಮರ್ಜಿಂಗ್ ಮೆಡಿಕಲ್ ಟೆಕ್ನಿಷಿಯನ್), ಇಬ್ಬರು ಡ್ರೈವರ್‌ಗಳು ಇರಲಿದ್ದಾರೆ. ಆರ್‌ಸಿಎಚ್ ಅಧಿಕಾರಿ ಡಾ.ಬಿ.ಜಂಬಯ್ಯ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರವೀಂದ್ರನಾಥ, ಶಸ್ತ್ರಚಿಕಿತ್ಸಕ ಡಾ.ಪ್ರಶಾಂತಬಾಬು, ಕಿಮ್ಸ್ ನಿರ್ದೇಶಕ ಡಾ.ವೈಜನಾಥ ಇಟಗಿ ಸೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts