More

    ಮತದಾರರ ಅಂತಿಮ ಪಟ್ಟಿ ಪ್ರಕಟ: ಪರಿಶೀಲಿಸಿಕೊಳ್ಳಲು ಪಕ್ಷಗಳ ಮುಖಂಡರಿಗೆ ಸೂಚನೆ

    ಕೊಪ್ಪಳ: ಜಿಲ್ಲೆಯ ಮತದಾರರ ಅಂತಿಮ ಪಟ್ಟಿ ಪ್ರಕಟಿಸಿದ್ದು, ಪರಿಶೀಲಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ-2023ರ ಸಂಬಂಧ ಗುರುವಾರ ಏರ್ಪಡಿಸಿದ್ದ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡಿದರು.

    ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದ್ದು, ಅದರ ಒಂದು ಪ್ರತಿಯನ್ನು ನೋಂದಾಯಿತ ರಾಜಕೀಯ ಪಕ್ಷಗಳಿಗೆ ನೀಡಲಾಗಿದೆ. ಮತದಾರರ ಪಟ್ಟಿಗಳನ್ನು ಎಸಿ, ತಹಸೀಲ್ದಾರ್ ಕಚೇರಿ ಹಾಗೂ ಸಂಬಂಧಪಟ್ಟ ಬೂತ್ ಮಟ್ಟದ ಅಧಿಕಾರಿಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಇರಿಸಿದ್ದು, ಪರಿಶೀಲಿಸಬಹುದು. ಅಲ್ಲದೇ ವೆಬ್‌ಸೈಟ್ ಞಠಿಠಿಚಿಟ.ಟಿಛಿ.ಟಿ ನಲ್ಲಿಯೂ ವೀಕ್ಷಿಸಬಹುದು ಎಂದರು.

    ವಿಧಾನಸಭೆ ಚುನಾವಣೆ ಸಂಬಂಧ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 1322 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಚುನಾವಣಾ ಆಯೋಗದ ಸೂಚನೆಯಂತೆ ಎಲ್ಲ ಬೂತ್‌ಗಳಲ್ಲಿ ಕುಡಿವ ನೀರು, ವಿದ್ಯುತ್ ಸಂಪರ್ಕ, ಅಂಗವಿಕಲರಿಗೆ ರ‌್ಯಾಂಪ್, ರಸ್ತೆ ಸಂಪರ್ಕ ಇರುವ ಬಗ್ಗೆ ಪರಿಶೀಲಿಸಿ, ವರದಿ ಸಲ್ಲಿಸುವಂತೆ ತಹಸೀಲ್ದಾರರಿಗೆ ಡಿಸಿ ಸೂಚಿಸಿದರು.

    ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ ಮಾತನಾಡಿ, ಅಂತಿಮ ಮತದಾರರ ಪಟ್ಟಿಯಂತೆ ಜಿಲ್ಲೆಯ ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 278 ಮತಗಟ್ಟೆಗಳಿದ್ದು, 1,15,924 ಪುರುಷರು, 1,14,334 ಮಹಿಳೆಯರು ಹಾಗೂ 8 ಇತರೆ ಮತದಾರರಿದ್ದಾರೆ. ಅದರಂತೆ ಕನಕಗಿರಿ-264 ಮತಗಟ್ಟೆ, 1,08,499 ಪುರುಷರು, 1,11,346 ಮಹಿಳಾ ಹಾಗೂ 8 ಇತರೆ ವೋಟರ್ಸ್ ಇದ್ದಾರೆ. ಗಂಗಾವತಿ-235 ಬೂತ್, 97,886 ಪುರುಷ, 99,323 ಮಹಿಳಾ ಹಾಗೂ 10 ಇತರೆ ಮತದಾರರಿದ್ದಾರೆ. ಯಲಬುರ್ಗಾ-256 ಮತಗಟ್ಟೆ, 1,10,555 ಪುರುಷ, 1,09,643 ಮಹಿಳಾ ಹಾಗೂ 11 ಇತರೆ ವೋಟರ್ಸ್ ಇದ್ದಾರೆ. ಕೊಪ್ಪಳ ಕ್ಷೇತ್ರದಲ್ಲಿ 289 ಮತಗಟ್ಟೆ, 1,24,444 ಪುರುಷ, 1,26,248 ಮಹಿಳಾ ಹಾಗೂ 12 ಇತರೆ ಮತದಾರರಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ 1322 ಮತಗಟ್ಟೆಗಳಿದ್ದು, 5,57,308 ಪುರುಷರು, 5,60,894 ಮಹಿಳಾ ಮತದಾರರು ಹಾಗೂ 49 ಇತರೆ ಮತದಾರರಿದ್ದು, ಒಟ್ಟು 11,18,251 ವೋಟರ್ಸ್ ಇದ್ದಾರೆ. ಈ ಪೈಕಿ 18 ರಿಂದ 19 ವಯೋಮಾನದ 23,002 ಮತದಾರರು, 13,824 ಅಂಗವಿಕಲರು ವೋಟರ್ಸ್ ಇದ್ದಾರೆ ಎಂದು ತಿಳಿಸಿದರು. ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ರಾಜು ಬಾಕಳೆ, ಕಷ್ಣಪ್ಪ ಎಂ.ಇಟ್ಟಂಗಿ, ಮಂಜುನಾಥ ಸೊರಟೂರು, ಕೆ.ಎಸ್ ಮೈಲಾರಪ್ಪ, ಮಲ್ಲಿಕಾರ್ಜುನ ಬಿ.ಗೌಡರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts