More

    ಅಸ್ಪೃಶ್ಯತೆ ತಡೆಗೆ ದೂರು ಪೆಟ್ಟಿಗೆ ಅಳವಡಿಸಿ; ಡಿಸಿ ವಿಕಾಸ್ ಕಿಶೋರ್ ಸೂಚನೆ

    ಕೊಪ್ಪಳ: ಅಸ್ಪೃಶ್ಯತೆ ಆಚರಣೆಯಿಂದ ತೊಂದರೆಗೊಳಗಾದವರು ಅಥವಾ ಆಚರಣೆ ಬಗ್ಗೆ ಅನಾಮಧೇಯವಾಗಿ ದೂರು ನೀಡಲು ಅನುಕೂಲವಾಗುವಂತೆ ತಹಸಿಲ್, ನಾಡಾ ಕಚೇರಿಯಲ್ಲಿ ದೂರು ಪೆಟ್ಟಿಗೆ ಅಳವಡಿಸಿ ಎಂದು ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಸೂಚಿಸಿದರು.

    ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅಸ್ಪೃಶ್ಯತೆ ತಡೆ ಕಾಯ್ದೆ ಪರಿಣಾಮಕಾರಿ ಅನುಷ್ಠಾನ ಸಭೆಯಲ್ಲಿ ಮಾತನಾಡಿದರು. ಕೆಲವರು ಅಂಜಿಕೆಯಿಂದ ಅನ್ಯಾಯ ನಡೆದರೂ ದೂರು ದಾಖಲಿಸುವುದಿಲ್ಲ. ಹೀಗಾಗಿ ಅನಾಮಧೇಯ ಹೆಸರಿನಲ್ಲಿ ಅನ್ಯಾಯದ ಬಗ್ಗೆ ದೂರು ಸಲ್ಲಿಸಲು ಅನುಕೂಲಕರ ವಾತಾವರಣ ನಿರ್ಮಿಸಬೇಕು. ಪತ್ರ ಆಧರಿಸಿ ಸ್ವಯಂ ದೂರು ದಾಖಲಿಸಿ ತನಿಖೆ ಕೈಗೊಳ್ಳಿ. ಸೆ.27ರೊಳಗೆ ದೂರು ಪೆಟ್ಟಿಗೆ ಅಳವಡಿಕೆ ಮಾಡಿ ಎಂದರು.

    ಗ್ರಾಮೀಣ ಭಾಗದ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರಿಗೂ ಪ್ರವೇಶ ಬಗ್ಗೆ ಬೋರ್ಡ್ ಅಳವಡಿಸಿ, ಅಧಿಕಾರಿಗಳ ದೂರವಾಣಿ ಸಂಖ್ಯೆ ನೀಡಿ. ಅಸ್ಪೃಶ್ಯತೆ ಆಚರಣೆ ಹೆಚ್ಚಿರುವ ಗ್ರಾಮಗಳಲ್ಲಿ ಜಾಗೃತಿ ಕೈಗೊಳ್ಳಿ. ಆಚರಣೆ ಕಂಡುಬಂದಲ್ಲಿ ಸ್ವಯಂ ದೂರು ದಾಖಲಿಸಿ. ತಹಸೀಲ್ದಾರ್, ತಾಪಂ ಇಒ, ಬಿಇಒ, ಸಮಾಜ ಕಲ್ಯಾಣಾ ಇಲಾಖೆೆ ಅಧಿಕಾರಿಗಳು ಆಗಾಗ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿ. ಸಂಪ್ರದಾಯವೆಂದು ಅಸ್ಪಶ್ಯತೆ ಆಚರಿಸುವುದನ್ನು ನಿಲ್ಲಿಸಿ. ಕೆಲ ಗ್ರಾಮಗಳಲ್ಲಿ ನಿರ್ದಿಷ್ಟ ಸಮುದಾಯದ ಕಾರ್ಯಕ್ರಮ ಅಥವಾ ಮರಣ ಹೊಂದಿದಾಗ ಹೋಟೆಲ್ ಮುಚ್ಚುತ್ತಾರೆ. ಅಂತಹ ಹೋಟೆಲ್ ಶಾಶ್ವತವಾಗಿ ಮುಚ್ಚಿಸಿ. ಮಿಯಾಪುರದಲ್ಲಿ ನಡೆದ ಘಟನೆ ಮಗುವಿನ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ತಕ್ಷಣ ಎಚ್ಚೆತ್ತು ಜಿಲ್ಲೆಯನ್ನು ಅಸ್ಪಶ್ಯತೆ ಮುಕ್ತಗೊಳಿಸಿ ಎಂದು ತಾಕೀತು ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts