More

    ಕಾರ್ಪೋರೇಟರ್ಸ್‌ ಪರ ಕೇಂದ್ರ ಸರ್ಕಾರ- ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಆರೋಪ

    ಕೊಪ್ಪಳ: ದೇಶದ ಶೇ.40 ಸಂಪತ್ತು ಶೇ.1ರಷ್ಟಿರುವ ಕಾರ್ಪೋರೇಟ್ ಕಂಪನಿಗಳ ಪಾಲಾಗಿದೆ ಎಂದು ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಡಿ.ಎಚ್.ಪೂಜಾರ ಆರೋಪಿಸಿದರು.

    ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ಸಿಪಿಐಎಂಎಲ್ (ಆರ್‌ಐ) ಜಿಲ್ಲಾ ಘಟಕ ಏರ್ಪಡಿಸಿದ್ದ ವಾರ್ಷಿಕ ಸ್ಥಾಯಿ ನಿಧಿ ಆಂದೋಲನ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಶೇ.99 ರಷ್ಟಿರುವ ರೈತರು, ಕಾರ್ಮಿಕರು, ಮಧ್ಯಮ ವ್ಯಾಪಾರಿಗಳ ಕೈಯಲ್ಲಿ ಕೇವಲ ಶೇ.60 ಸಂಪತ್ತಿದೆ. ಹಾಗಾಗಿ ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ. ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ. ನೋಟ್‌ಬ್ಯಾನ್, ಜಿಎಸ್‌ಟಿ ಜಾರಿ ಹಾಗೂ ಕೋವಿಡ್ ಸಾಂಕ್ರಾಮಿಕದ ನಡುವೆಯೂ ಶ್ರೀಮಂತರ ಸಂಪತ್ತು ತೀವ್ರವಾಗಿ ಹೆಚ್ಚಳಗೊಂಡಿದೆ. 2021-2022ರ ಆರ್ಥಿಕ ವರ್ಷದಲ್ಲಿ ಜಿಎಸ್‌ಟಿಯಿಂದ 14.83 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ಇದರಲ್ಲಿ ಶೇ.97 ತೆರಿಗೆ ಹಣ ಬಡವರು, ಮಧ್ಯಮ ವರ್ಗ ಹಾಗೂ ವ್ಯಾಪಾರಿಗಳಿಂದ ಸಂಗ್ರಹಗೊಂಡಿದೆ. ಆದರೆ, ಡಬಲ್ ಇಂಜಿನ್ ಸರ್ಕಾರ, ಕಾರ್ಪೋರೇಟ್ ಕಂಪನಿಗಳ ಪರವಿರುವುದು ಖೇದಕರ ಎಂದರು. ಜಿಲ್ಲಾ ಕಾರ್ಯದರ್ಶಿ ಬಸವರಾಜ ನರೇಗಲ್, ಪ್ರಮುಖರಾದ ಪರಶುರಾಮ್, ನಾಗಪ್ಪ ಮಲ್ಲಾಪುರ, ಫಕೀರಜ್ಜ, ರಾಮಣ್ಣ, ಲಕ್ಷ್ಮಣ, ಲಿಂಗಯ್ಯ ಶಶಿಮಠ, ರಾಜಪ್ಪ, ಯಮನೂರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts