More

    ರೈತನಿಗೆ 11ಇ ನಕ್ಷೆ ನೀಡಲು ಲಂಚದ ಬೇಡಿಕೆ: ಎಸಿಬಿ ಬಲೆಗೆ ಬಿದ್ದ ಭೂಮಾಪಕ


    ಕೊಪ್ಪಳ: ಜಮೀನಿನ 11ಇ ನಕ್ಷೆ ನೀಡಲು ಲಂಚ ಪಡೆಯುತ್ತಿದ್ದ ಭೂಮಾಪಕನ ಮೇಲೆ ಎಸಿಬಿ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ, ವಶಕ್ಕೆ ಪಡೆದಿದ್ದಾರೆ.

    ತಾಲೂಕಿನ ಹನುಮನಹಟ್ಟಿ ಗ್ರಾಮದ ಹನುಮಪ್ಪ ಮ್ಯಾದನೇರಿ ತಮ್ಮ ಜಮೀನಿನ 11ಇ ನಕ್ಷೆ ಪಡೆಯಲು ತಾಲೂಕು ಭೂಮಾಪಕರ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಪರವಾನಗಿ ಭೂಮಾಪಕ ರುದ್ರೇಶ್ ಕೆಲಸ ಮಾಡಿಕೊಡಲು 25ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಈಗಾಗಲೇ 16 ಸಾವಿರ ರೂ. ಪಡೆದಿದ್ದರೂ ನಕ್ಷೆ ನೀಡಿರಲಿಲ್ಲ. ಬಾಕಿ ಹಣ ನೀಡುವಂತೆ ಸತಾಯಿಸುತ್ತಿದ್ದ. ಇದರಿಂದ ಬೇಸತ್ತ ರೈತ, ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಅಧಿಕಾರಿಗಳು, ಕೊಪ್ಪಳದ ಬಸವೇಶ್ವರ ವೃತ್ತದ ಬಳಿ ರೈತನಿಂದ ಭೂಮಾಪಕ ಲಂಚ ಪಡೆಯುವಾಗ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಕೊಪ್ಪಳ ಎಸಿಬಿ ಠಾಣೆಯ ಡಿಎಸ್‌ಪಿ ಶಿವಕುಮಾರ್ ಎಂ.ಸಿ, ಪಿಐಗಳಾದ ಶಿವರಾಜ ಇಂಗಳೆ, ಆಂಜನೇಯ ಡಿ.ಎಸ್., ಸಿಬ್ಬಂದಿ ಸಿದ್ದಯ್ಯ, ರಂಗನಾಥ, ಗಣೇಶ್, ಜಗದೀಶ್, ಉಮೇಶ್, ಸವಿತಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts