More

    ಕಾಂಗ್ರೆಸ್ ನಿರಾಧಾರ ಆರೋಪ; ಬಿಜೆಪಿ ಜಿಲ್ಲಾ ಅಧ್ಯಕ್ಷ ದೊಡ್ಡನಗೌಡ ಪಾಟೀಲ್ ಹೇಳಿಕೆ

    ಕೊಪ್ಪಳ: ಬಿಟ್ ಕಾಯಿನ್ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇತರ ಬಿಜೆಪಿ ನಾಯಕರನ್ನು ಎಳೆದು ತರುವ ಮೂಲಕ ಕಾಂಗ್ರೆಸ್ ನಾಯಕರು ನಿರಾಧಾರ ಆರೋಪ ಮಾಡತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ದೊಡ್ಡನಗೌಡ ಪಾಟೀಲ್ ಹೇಳಿದರು.

    ಹ್ಯಾಕರ್ ಶ್ರೀಕೃಷ್ಣನ ಖಾತೆಯಿಂದ ಬಿಟ್-ಕಾಯಿನ್ ವರ್ಗಾಯಿಸಿಲ್ಲ. ಆರೋಪಿ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಬಿಟ್ ಕಾಯಿನ್ ವ್ಯಾಲೆಟ್ ಪಾಸ್‌ವಾರ್ಡ್ ಬದಲಿಸಿದ್ದಾರೆ. ಈ ಕುರಿತ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಪೊಲೀಸರು, ತಜ್ಞರ ಸಹಯೋಗದೊಂದಿಗೆ ಪಾರದರ್ಶಕವಾಗಿ ಕ್ರಮಕೈಗೊಂಡಿದ್ದು, ಸಂಪೂರ್ಣ ಪ್ರಕ್ರಿಯೆಯನ್ನು ಚಿತ್ರೀಕರಿಸಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದರು.

    ಬಿಟ್ ಕಾಯಿನ್ ಪ್ರಕರಣ ತನಿಖಾ ಹಂತದಲ್ಲಿದ್ದಾಗ ಬಸವರಾಜ ಬೊಮ್ಮಾಯಿ ಗೃಹ ಸಚಿವರಾಗಿದ್ದರು. ಡಿಐಜಿ ದರ್ಜೆಯ ಅಧಿಕಾರಿ ಮೇಲ್ವಿಚಾರಣೆಯಲ್ಲಿ ದಕ್ಷ ಅಧಿಕಾರಿಗಳ ತಂಡ ರಚಿಸಿ ತನಿಖೆ ನಡೆಸಲಾಗಿದೆ. ತನಿಖಾ ಪ್ರಕ್ರಿಯೆಯಲ್ಲಿ ಐಐಎಸ್‌ಸಿ ನೆರವು ಪಡೆಯುವುದರ ಜತೆಗೆ ಇ-ಆಡಳಿತ, ಗ್ರೂಪ್ ಸೈಬರ್ ತಜ್ಞರು ಭಾಗವಹಿಸಿದ್ದಾರೆ. ಗೃಹ ಸಚಿವರು ಅಥವಾ ಯಾವುದೇ ರಾಜಕಾರಣಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಆದರೂ, ಅನಗತ್ಯ ಪ್ರಚಾರ ಪಡೆಯುವ ಮೂಲಕ ವರ್ಚಸ್ಸು ಹೆಚ್ಚಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಯತ್ನಿಸುತ್ತಿದ್ದಾರೆಂದು ದೊಡ್ಡನಗೌಡ ಪಾಟೀಲ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts