More

    ಅಂಜನಾದ್ರಿ ಅಭಿವೃದ್ಧಿಗೆ ಬದ್ಧ: ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಹೇಳಿಕೆ

    ಕೊಪ್ಪಳ: ಅಂಜನಾದ್ರಿ ಅಭಿವೃದ್ಧಿ ಬಗ್ಗೆ ಸಿಎಂ ವಿಶೇಷ ಆಸಕ್ತಿ ವಹಿಸಿದ್ದು, ಅವರ ನೇತೃತ್ವದಲ್ಲಿ ಶೀಘ್ರವೇ ವಿಶೇಷ ಸಭೆ ನಡೆಸಲಾಗುವುದೆಂದು ಸಚಿವ ಆನಂದ ಸಿಂಗ್ ಹೇಳಿದರು.

    ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಭಕ್ತರಿಗೆ ಕನಿಷ್ಠ ಮೂಲಸೌಕರ್ಯ ಕಲ್ಪಿಸಬೇಕಿದೆ. ಸದ್ಯದಲ್ಲೇ ಕಾಮಗಾರಿ ಕೈಗೊಳ್ಳಲಾಗುವುದು. ಉಳಿದಂತೆ ಮಾಸ್ಟರ್ ಪ್ಲಾೃನ್ ರಚಿಸಿ ಸಮಗ್ರ ಅಭಿವೃದ್ಧಿ ಕೈಗೊಳ್ಳಲಾಗುವುದು. ದೇವಾಲಯದ ಬಳಿ ಸರ್ಕಾರಿ ಭೂಮಿ ಇಲ್ಲ. ಖಾಸಗಿ ಜಮೀನುಗಳಿದ್ದು, ಸ್ವಾಧೀನ ಸೇರಿ ಇತರ ಕೆಲಸಗಳಿವೆ. ಅಧಿಕಾರಿಗಳ ಮಟ್ಟದಲ್ಲೆ ಸಭೆ ನಡೆಸಿದರೂ ಸಿಎಂ ಹಂತದಲ್ಲಿ ಇತ್ಯರ್ಥವಾಗಬೇಕು. ಹೀಗಾಗಿ ಸಿಎಂ ನೇತೃತ್ವದಲ್ಲಿ ಸಭೆ ನಡೆಸಲಾಗುವುದು. ಕೊಪ್ಪಳಕ್ಕೆ ಪ್ರತ್ಯೆಕ ಹವಾಮಾ ಕಚೇರಿ ನೀಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

    ಹುಬ್ಬಳ್ಳಿ ಗಲಭೆ ಕುರಿತು ಪ್ರತಿಕ್ರಿಯಿಸಿ, ಯಾರೇ ಆಗಲಿ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಈಗಾಗಲೇ ಗಲಭೆಕೋರರನ್ನು ಬಂಧಿಸಲಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು. ವಿಜಯನಗರವು ರೋಮ್ ನಾಗರಿಕತೆ ನಂತರ ಅತ್ಯುನ್ನತ ಮಟ್ಟದ ಆಡಳಿತ ನಡೆಸಿದ ಹಿಂದು ಸಾಮ್ರಾಜ್ಯ. ಹೀಗಾಗಿ ಅಲ್ಲಿಂದಲೇ ಕಾರ್ಯಕಾರಿಣಿ ನಡೆಸಿ, ಚುನಾವಣೆ ಗೆಲ್ಲಲು ಬೇಕಾದ ರೂಪುರೇಷ ರೂಪಿಸಲಾಗಿದೆ. ಬರುವ ಚುನಾವಣೆಯಲ್ಲಿ ಮತ್ತೆ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಬಗ್ಗೆ ಸಿಎಂ ಹಾಗೂ ವರಿಷ್ಠರು ತೀರ್ಮಾನಿಸಲಿದ್ದಾರೆ. ನಾನು ಸಾಮಾನ್ಯ ಸಚಿವ ಹೆಚ್ಚಿನ ಮಾಹಿತಿ ಇರಲ್ಲ ಎಂದರು.

    ಕೊಪ್ಪಳ ಕಿಮ್ಸ್ ಹಾಗೂ ಜಿಲ್ಲಾಸ್ಪತ್ರೆ ನಡುವೆ ಸಮನ್ವಯ ಕೊರತೆ ಬಗ್ಗೆ ದೂರುಗಳು ಬಂದಿದ್ದು, ಪ್ರತ್ಯೇಕ ಸಭೆ ನಡೆಸಿ ಲೋಪ ದೋಷ ಸರಿಪಡಿಸಲಾಗುವುದು. ನಿರ್ಲಕ್ಷೃವಹಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
    | ಆನಂದ ಸಿಂಗ್, ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts