More

    ಅಗ್ನಿಪಥ್ ಅವೈಜ್ಞಾನಿಕ ಯೋಜನೆ ಹಿಂಪಡೆಯುವಂತೆ ಎಐಡಿವೈಒ ಜಿಲ್ಲಾ ಸಮಿತಿ ಪದಾಧಿಕಾರಿಗಳ ಆಗ್ರಹ

    ಕೊಪ್ಪಳ: ಕೇಂದ್ರ ಸರ್ಕಾರ ಘೋಷಿಸಿರುವ ಅಗ್ನಿಪಥ್ ಯೋಜನೆ ಅವೈಜ್ಞಾನಿಕವಾಗಿದ್ದು, ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿ ಎಐಡಿವೈಒ ಜಿಲ್ಲಾ ಸಮಿತಿ ಪದಾಧಿಕಾರಿಗಳು ನಗರದ ಅಶೋಕ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

    ಮುಂದಿನ ಒಂದು ವರ್ಷದಲ್ಲಿ 10 ಲಕ್ಷ ಹುದ್ದೆ ಭರ್ತಿ ಮಾಡುವುದಾಗಿ ಹೇಳುವ ಮೂಲಕ ಯುವಕರನ್ನು ದಾರಿ ತಪ್ಪಿಸಲಾಗುತ್ತಿದೆ. ಹಿಂದೆಯೂ ಕೇಂದ್ರ ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಗುರುತಿಸಿ ಅವುಗಳನ್ನು ರದ್ದುಪಡಿಸಲಾಗಿದೆ. ಇದರಿಂದ ಲಕ್ಷಾಂತರ ಹುದ್ದೆಗಳನ್ನು ಯುವಕರು ಕಳೆದುಕೊಳ್ಳುವಂತಾಗಿದೆ. ಇದೀಗ ಮತ್ತೊಮ್ಮೆ ಅಂಥ ಕುತಂತ್ರ ನಡೆಸಲಾಗುತ್ತಿದೆ. ಖಾಸಗಿ ವಲಯದಲ್ಲೂ ನಿರುದ್ಯೋಗ ತಾಂಡವಾಡುತ್ತಿದ್ದು, ದೇಶದಲ್ಲಿ 45 ಕೋಟಿ ಜನರ ನಿರುದ್ಯೋಗಿಗಳಾಗಿದ್ದಾರೆ. ಈವರೆಗೂ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇಲ್ಲವೆಂದು ವಾದಿಸಿರುವ ಕೇಂದ್ರ ಸದ್ಯ ಚುನಾವಣಾ ಲಾಭಕ್ಕಾಗಿ ಯೋಜನೆ ಘೋಸಿಷಿದೆ ಎಂದು ಆರೋಪಿಸಿದರು.

    ಯುವಕರ ಹಾದಿ ತಪ್ಪಿಸಲಿರುವ ಅಗ್ನಿಪಥ್ ಯೋಜನೆ ಕೈಬಿಡಬೇಕು. ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಿಕೊಳ್ಳಬೇಕು. ಗ್ತುತಿಗೆ ಆಧಾರದ ಕೆಲಸ ಕೈಬಿಟ್ಟು ಕಾಯಂ ನೇಮಕಾತಿ ನಡೆಸಿ. ಪ್ರಜಾಸತ್ತಾತ್ಮಕ ಹೋರಾಟ ಹತ್ತಿಕ್ಕುವ ಕೆಲಸ ಕೈಬಿಡಬೇಕು. ಜನವಿರೋಧಿ ನೀತಿಗಳನ್ನನು ಅನುಷ್ಠಾನ ಮಾಡಬಾರದು. ಜಾಗತೀಕರಣ ನೀತಿ ಅತಿಯಾಗಿ ಅನ್ವಯಿಸಬಾರದು. ದೇಶದ ರಕ್ಷಣಾ ವಿಷಯದಲ್ಲಿ ತಪ್ಪು ನಿರ್ಣಯ ಕೈಗೊಳ್ಳಬಾರದು. ಯುವಜನರನ್ನು ವಂಚಿಸದೆ ಅರ್ಹತೆಗೆ ತಕ್ಕಂತೆ ಉದ್ಯೋಗ ಸೃಷ್ಟಿಸಬೇಕು. ಕೂಡಲೇ ಅವೈಜ್ಞಾನಿಕ ಯೋಜನೆ ಕೈ ಬಿಡದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದರು. ಎಐಡಿವೈಒ ಜಿಲ್ಲಾಧ್ಯಕ್ಷ ರಮೇಶ ವಂಕಲಕುಂಟಿ, ಜಿಲ್ಲಾ ಕಾರ್ಯದರ್ಶಿ ಶರಣಬಸವ ಪಾಟೀಲ್, ಗಂಗಾರಾಜ, ಶಿವಶಂಕರ್, ಈಶಪ್ಪ ಹಜರತ್ ಅಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts