More

    ಸಂಗಮನಾಥನ ಪೂಜೆ, ದರ್ಶನಕ್ಕೆ ಮಾತ್ರ ಅವಕಾಶ

    ಕೂಡಲಸಂಗಮ: ಕರೊನಾ ವೈರಸ್ ಭೀತಿ ಹಿನ್ನೆಲೆ ಸುಕ್ಷೇತ್ರ ಕೂಡಲಸಂಗಮದ ಸಂಗಮೇಶ್ವರ ದೇವಾಲಯದಲ್ಲಿ ಭಾನುವಾರ ಒಂದು ಜೋಡಿ ಸರಳವಾಗಿ ವಿವಾಹವಾಗುವುದರ ಮೂಲಕ ನೂತನ ಜೀವನಕ್ಕೆ ಕಾಲಿಟ್ಟರು.

    ದೇವಾಲಯ ಆವರಣದಲ್ಲಿ 6 ಜವಳದ ಕಾರ್ಯಗಳು ಸರಳವಾಗಿ ನಡೆದವು. 14 ಜನ ಭಕ್ತರು ಕ್ಷೇತ್ರಾಧಿಪತಿ ಸಂಗಮನಾಥನಿಗೆ ಅಭಿಷೇಕ ಸಲ್ಲಿಸಿದರು.

    ಮದುವೆ ಮುಂಗಡವಾಗಿ ನೋಂದಣಿಯಾದ್ದರಿಂದ ಸರಳವಾಗಿ ನಡೆಸುವಂತೆ ಮಂಡಳಿ ಅಧಿಕಾರಿಗಳು ಸೂಚಿಸಿದ್ದರಿಂದ ದೇವಾಲಯ ಆವರಣದಲ್ಲಿ ಮದುವೆ ಕಾರ್ಯ ನಡೆಯಿತು. ಸರಳ ಮದುವೆ, ಜವಳದ ಕಾರ್ಯ, ಅಭಿಷೇಕಕ್ಕೆ ಬಂದ ಭಕ್ತರನ್ನು ಹೊರತುಪಡಿಸಿ ಪ್ರವಾಸಿಗರು ಇಲ್ಲದೆ ದೇವಾಲಯ ಆವರಣ ಬಿಕೋ ಎನ್ನುತ್ತಿತ್ತು.

    ಸೋಮವಾರದಿಂದ ಸಂಗಮೇಶ್ವರ ದೇವಾಲಯದಲ್ಲಿ ಪೂಜೆ ಮತ್ತು ದರ್ಶನ ಮಾತ್ರ ಇರುವುದು. ಜವಳ, ಮದುವೆ, ದೀರ್ಘ ದಂಡ ನಮಸ್ಕಾರ, ಸೀಮಂತ ಮುಂತಾದ ಕಾರ್ಯಗಳು ಹಾಗೂ ಅಭಿಷೇಕಗಳು ನಡೆಯುವುದಿಲ್ಲ. ದೇವಾಲಯದಲ್ಲಿ ನಿತ್ಯದಂತೆ ಕಾರ್ಯಗಳು ನಡೆಯುತ್ತವೆ ಎಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತೆ ರಾಜಶ್ರೀ ಅಗಸರ ಹೇಳಿದರು.

    ವಳಕಲದಿನ್ನಿ ಗ್ರಾಮ ವ್ಯಾಪ್ತಿಯ ಯರಿದ್ಯಾಮ್ಮವನ ಜಾತ್ರೆ ಮಾ.17 ರಂದು ನಿಗದಿಯಾಗಿತ್ತು. ಕರೊನಾ ವೈರಸ್ ಭೀತಿಯಿಂದ ಭಾನುವಾರ ನಡೆದ ಭಕ್ತರ ಸಭೆಯಲ್ಲಿ ಜಾತ್ರೆಯನ್ನು ನಿಷೇಧಿಸುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಗ್ರಾಮ ಲೆಕ್ಕಾಧಿಕಾರಿ ಎಸ್.ಆರ್.ಪಾಟೀಲ ತಿಳಿಸಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts