More

    ಕೊಂಕಣ ಶಾಲೆ ಉ.ಕ. ಜಿಲ್ಲೆಯ ಹೆಮ್ಮೆ

    ಕುಮಟಾ: ಇಲ್ಲಿನ ಕೊಂಕಣ ಎಜುಕೇಶನ್ ಟ್ರಸ್ಟ್‌ನ ಸಿವಿಎಸ್‌ಕೆ ಪ್ರೌಢಶಾಲೆಯ ನವೀಕೃತ ಕಂಪ್ಯೂಟರ್ ಲ್ಯಾಬ್ ಹಾಗೂ 2023-24ನೇ ಸಾಲಿನ ಅಟಲ್ ಟಿಂಕರಿಂಗ್ ಲ್ಯಾಬ್ ಚಟುವಟಿಕೆಗಳನ್ನು ಮಾದನಗೇರಿಯ ಶ್ರೀಮಹಾಲಸಾ ಸಿದ್ಧಿವಿನಾಯಕ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಸುನಿಲ್ ಪೈ ಉದ್ಘಾಟಿಸಿದರು.
    ಬಳಿಕ ಕೊಂಕಣ ಟ್ರಸ್ಟ್‌ನಿಂದ ಸನ್ಮಾನಿತರಾಗಿ ಮಾತನಾಡಿದ ಸುನಿಲ್ ಪೈ, ಮಕ್ಕಳಿಗೆ ಆಟೋಟದ ಜೊತೆಗೆ ತಂತ್ರಜ್ಞಾನದ ಅರಿವು ಅತ್ಯಗತ್ಯ. ಲ್ಯಾಬ್‌ನ ಪ್ರಯೋಜನವನ್ನು ಮಕ್ಕಳು ಪಡೆಯುವಂತಾಗಲಿ. ಲ್ಯಾಬ್‌ನ ನವೀಕರಣಕ್ಕಾಗಿ ನಾವು ದೇಣಿಗೆ ನೀಡಿದ ಏಳು ಲಕ್ಷ ರೂ.ಗಳು ಶ್ರೀದೇವರ ಅನುಗ್ರಹ, ನಾವು ನೆಪ ಮಾತ್ರ ಎಂದರು. ಕೊಂಕಣ ಶಾಲೆ ಜಿಲ್ಲೆಗೆ ಹೆಮ್ಮೆ ಎಂದರು.
    ಅತಿಥಿ ಮಹಾಲಸಾ ದೇವಸ್ಥಾನದ ಖಜಾಂಚಿ ವಿದ್ಯಾಧರ ಪೈ ಮಾತನಾಡಿ, ತಂತ್ರಜ್ಞಾನ ಪ್ರತಿಯೊಂದು ಕ್ಷೇತ್ರವನ್ನು ಆವರಿಸಿದೆ. ಅದರ ಅಧ್ಯಯನವು ಹೊಸ ಅವಕಾಶಗಳ ಮಾರ್ಗ ತೆರೆದು ಸಾಧನೆಗೆ ಪೂರಕವಾಗಬಲ್ಲದು ಎಂದು ಶುಭಕೋರಿದರು.
    ಅಧ್ಯಕ್ಷತೆ ವಹಿಸಿದ್ದ ಕೊಂಕಣ ಟ್ರಸ್ಟ್ ಅಧ್ಯಕ್ಷ ವಿಠ್ಠಲ ನಾಯಕ ಮಾತನಾಡಿ, ಸಾಧನೆಗೆ ಹಂಬಲಿಸುವ ಪ್ರತಿಯೊಬ್ಬರಲ್ಲೂ ಕೌಶಲ ಇರಬೇಕಾಗುತ್ತದೆ. ನಮ್ಮ ಸಂಸ್ಥೆ ಕಂಪ್ಯೂಟರ್ ಜ್ಞಾನಕ್ಕೆ ಒತ್ತು ನೀಡಿ, ವರ್ಷದಿಂದ ವರ್ಷಕ್ಕೆ ವ್ಯವಸ್ಥೆಯನ್ನು ದಾನಿಗಳಿಂದ ಉನ್ನತೀಕರಿಸುತ್ತಿದೆ ಎಂದರು.
    ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಮುರಲೀಧರ ಪ್ರಭು, ಶಾಲೆಗೆ ಕಂಪ್ಯೂಟರ್ ಲ್ಯಾಬ್‌ನ ನವೀಕರಣದ ಅಗತ್ಯ ಮನಗಂಡು ತಕ್ಷಣ ಏಳು ಲಕ್ಷ ರೂ. ದೇಣಿಗೆ ನೀಡಿ ಯೋಜನೆ ಸಕಾರಗೊಳಿಸಿದ ಸುನಿಲ್ ಪೈ ಕೃತಜ್ಞತೆಗೆ ಪಾತ್ರರು ಎಂದರು.
    ಶಿಕ್ಷಕರಾದ ರವೀಂದ್ರ ಕಿಣಿ, ಅಮಿತಾ ಗೋವೆಕರ್, ಜ್ಯೋತಿ ಪಟಗಾರ, ಪೂರ್ಣಿಮಾ ಶಾನಭಾಗ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ದಿಶಾ ಡಿ. ನಾಯ್ಕ, ಸಿಂಚನಾ ಜಿ. ಭಟ್ಟ ಕಂಪ್ಯೂಟರ್ ಬೇಸಿಕ್ಸ್, ಪಾವನಿ ನಾಯ್ಕ ಚಂದ್ರಯಾನ-3 ಪಿಪಿಟಿ, ಅಥರ್ವ ಬಾಳಗಿ, ಧ್ರುವ ನಾಯ್ಕ ಮತ್ತು ಅನಿರುದ್ಧ ಇವರ ಎನಿಮೇಶನ್ ಪ್ರಾತ್ಯಕ್ಷಿಕೆ ಜರುಗಿತು. ಉನ್ನತಿ ನಾಯ್ಕ ಭರತನಾಟ್ಯ ಪ್ರದರ್ಶಿಸಿದಳು.
    ವಿಶ್ವಸ್ಥ ರಮೇಶ ಪ್ರಭು ಸ್ವಾಗತಿಸಿದರು, ಮುಖ್ಯಾಧ್ಯಾಪಕಿ ಸುಮಾ ಪ್ರಭು ವಂದಿಸಿದರು, ಪ್ರಜ್ಞಾ ಭಟ್ಟ ಮತ್ತು ವೈಷ್ಣವಿ ಹೆಗಡೆ ನಿರೂಪಿಸಿದರು. ಜಂಟಿ ಕಾರ್ಯದರ್ಶಿ ಶೇಷಗಿರಿ ಶಾನಭಾಗ, ರಾಮಕೃಷ್ಣ ಗೋಳಿ, ಸಲಹೆಗಾರ ಆರ್.ಎಚ್. ದೇಶಭಂಡಾರಿ, ಮುಖ್ಯಶಿಕ್ಷಕಿಯರಾದ ಸುಜಾತಾ ನಾಯ್ಕ, ಸಾವಿತ್ರಿ ಹೆಗಡೆ, ಪ್ರಾಚಾರ್ಯ ಕಿರಣ ಭಟ್ಟ, ವಿಧಾತ್ರಿ ಅಕಾಡೆಮಿಯ ಗುರುರಾಜ ಶೆಟ್ಟಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts