More

  ಗಡಿಗ್ರಾಮಗಳಲ್ಲಿ ಹೆಚ್ಚಾದ ಆತಂಕ

  ಕೊಂಡ್ಲಹಳ್ಳಿ: ನೆರೆಯ ಆಂಧ್ರದ ರಾಯದುರ್ಗದಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಗಡಿಭಾಗದ ಜನರಲ್ಲಿ ಆತಂಕ ಹೆಚ್ಚಾಗುತ್ತಿದೆ.

  ಕೋನಸಾಗರ-ಉಡೇವು ಮಾರ್ಗ ಮಧ್ಯ ರಾಯದುರ್ಗದ ಸಮೀಪ ಚೆಕ್‌ಪೋಸ್ಟ್ ಇಲ್ಲದ ಕಾರಣ ದಿನನಿತ್ಯ ವಾಹನ ಹಾಗೂ ಜನ ಸಂಚಾರ ಹೆಚ್ಚಾಗುತ್ತಿದೆ.

  ಕೊಂಡ್ಲಹಳ್ಳಿ, ಕೋನಸಾಗರ, ಉಡೇವು, ಹನುಮಂತನಹಳ್ಳಿ, ಮಲ್ಲಸಮುದ್ರ ಗ್ರಾಮಗಳಲ್ಲಿ ಆತಂಕ ಮನೆ ಮಾಡಿದೆ. ಲಾಕ್‌ಡೌನ್ ಸಡಿಲಗೊಂಡ ನಂತರ ಸಂಚಾರ ತೀವ್ರವಾಗಿದೆ.

  ಸಂತೆಗಳಿಗೆ ರಾಯದುರ್ಗದಿಂದ ಸರಕು, ತರಕಾರಿಗಳು ಬರುತ್ತಿವೆ. ಆಂಧ್ರದ ಜನ ವಿವಿಧ ವಾಹನಗಳಲ್ಲಿ ಕೋನಸಾಗರದವರೆಗೆ ಬಂದು ಹೋಗುತ್ತಿದ್ದು, ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ ಎಂದು ಗ್ರಾಪಂ ಮಾಜಿ ಸದಸ್ಯ ಎ.ಪ್ರಕಾಶ್, ಉಣ್ಣೆ ಸೊಸೈಟಿ ನಿರ್ದೇಶಕ ಟಿ.ಈಶ್ವರಪ್ಪ, ಜಿ.ಪ್ರಕಾಶ್, ಶ್ರೀನಾಥ್ ಆತಂಕ ವ್ಯಕ್ತಪಡಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts