More

    ಕೋನಸಾಗರಕ್ಕೆ ಪಿಎಚ್‌ಸಿ ಭಾಗ್ಯ ಸಿಕ್ಕೀತೆ?

    ಟಿ.ರಾಮಚಂದ್ರಪ್ಪ ಕೊಂಡ್ಲಹಳ್ಳಿ: ಕೋನಸಾಗರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಬೇಕೆಂಬುದು ಗ್ರಾಮಸ್ಥರ ಬಹು ವರ್ಷಗಳ ಬೇಡಿಕೆ. ಇದಿನ್ನೂ ಮನವಿ ಸಲ್ಲಿಕೆಯ ಹಂತದಲ್ಲೇ ಇದೆ, ಸಾಕಾರಗೊಂಡಿಲ್ಲ.

    ಕೋನಸಾಗರ ಗ್ರಾಪಂ ವ್ಯಾಪ್ತಿಯಲ್ಲಿ ಶೇ.80ರಷ್ಟು ಎಸ್ಸಿ-ಎಸ್ಟಿ, ಕುರುಬ ಹಾಗೂ ಇತರೆ ಸಮುದಾಯ ಸೇರಿ 9 ಸಾವಿರ ಜನಸಂಖ್ಯೆ ಇದೆ. ಉಡೇವು, ನೇತ್ರನಹಳ್ಳಿ, ಸಣ್ಣಪಾಪಯ್ಯನಹಟ್ಟಿ, ಕೆಂಗೋಬಯ್ಯನಹಟ್ಟಿ, ಕಪ್ಪಡಬಂಡೆಹಟ್ಟಿ, ಕುಂಬಾರಹಟ್ಟಿ, ಚೌಡಿಪುರ, ಏಣಿಮ್ಯಾಗಳಹಟ್ಟಿ ಗ್ರಾಮಗಳಿವೆ.

    ಈ ಹಿಂದೆ ಬಿ.ಜಿ.ಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಉಪ ಕೇಂದ್ರ ತೆರೆದು ಹೆರಿಗೆ ಸೌಲಭ್ಯ, ಇತರ ಚಿಕಿತ್ಸೆ ಒದಗಿಸಲಾಗುತ್ತಿತ್ತು. ಆದರೆ 10 ವರ್ಷದಿಂದ ಈ ಸೇವೆ ರದ್ದಾಗಿದೆ. ಕೆಮ್ಮು, ನೆಗಡಿ ಪರೀಕ್ಷೆಗಷ್ಟೇ ಸೀಮಿತವಾಗಿದೆ. ಗಂಭೀರ ಕಾಯಿಲೆ, ತುರ್ತು ಚಿಕಿತ್ಸೆ ಬೇಕಿದ್ದರೆ ಮೊಳಕಾಲ್ಮೂರು, ಕೊಂಡ್ಲಹಳ್ಳಿ ಆಸ್ಪತ್ರೆಗೆ ತೆರಳುವುದು ಅನಿವಾರ್ಯವಾಗಿದೆ.

    ಸ್ಥಳೀಯ ಜನಪ್ರತಿನಿಧಿಗಳು, ಶಾಸಕರಿಗೆ ಈ ಸಂಬಂಧ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನ ಸಿಗದಂತಾಗಿದೆ. ಮೊಳಕಾಲ್ಮೂರು ಕ್ಷೇತ್ರ ಶಾಸಕರು, ಆರೋಗ್ಯ ಸಚಿವರೂ ಆಗಿರುವ ಬಿ.ಶ್ರೀರಾಮುಲು ಅವರು ಇತ್ತೀಚೆಗೆ ಗ್ರಾಮಕ್ಕೆ ಭೇಟಿ ನೀಡಿದ್ದಾಗ ಸ್ಥಳೀಯರ ಮನವಿಗೆ ಸ್ಪಂದಿಸಿದ್ದರು. ಅವರು ನೀಡಿದ್ದ ಭರವಸೆಯಂತೆ ಆರೋಗ್ಯ ಕೇಂದ್ರಕ್ಕೆ ಹಸಿರುನಿಶಾನೆ ಸಿಗಬಹುದೆ? ಕಾದು ನೋಡಬೇಕಿದೆ.

    ಭೂಮಿಕಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ಎಚ್.ಆಂಜನೇಯ ಹೇಳಿಕೆ: ಚಿತ್ರದುರ್ಗ ಜಿಲ್ಲೆ ಗಡಿ ಗ್ರಾಮ ಕೋನಸಾಗರದಲ್ಲಿ ಆರೋಗ್ಯ ಕೇಂದ್ರ ತೆರೆಯುವುದರಿಂದ ನೆರೆಯ ಆಂಧ್ರ ಪ್ರದೇಶದ ಅವಲಂಬನೆ, ಚಿತ್ರದುರ್ಗ, ಬಳ್ಳಾರಿಗೆ ಹೋಗುವ ಕಷ್ಟ ತಪ್ಪುತ್ತದೆ.

    ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಟಿ.ಇ.ಶಿವಪ್ರಕಾಶ್ ಹೇಳಿಕೆ: ಹಲವು ಹಳ್ಳಿಗಳ ಸಂಪರ್ಕ ಕೇಂದ್ರವಾಗಿರುವ ಗ್ರಾಮಕ್ಕೆ ಆರೋಗ್ಯ ಸಚಿವರು ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಿ ಗ್ರಾಮೀಣ ಆರೋಗ್ಯ ಕಾಪಾಡಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts