More

    ಕೊಂಡ್ಲಹಳ್ಳಿಯಲ್ಲಿ ವಿಜ್ಞಾನ ಮಾದರಿ ಪ್ರದರ್ಶನ

    ಕೊಂಡ್ಲಹಳ್ಳಿ: ಇಲ್ಲಿನ ಸರ್ವೋದಯ ಹಿಪೋಕ್ಯಾಂಪಸ್ ಶಾಲಾವರಣದಲ್ಲಿ ಅಗಸ್ತ್ಯ ಫೌಂಡೇಷನ್ ಭಾನುವಾರ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಗಮನಸೆಳೆಯಿತು.

    ಬಿಸಿಗಾಳಿ ಮೇಲೇರುವುದು, ಸೂರ್ಯ-ಚಂದ್ರ ಗ್ರಹಣ ಸಂಭವ, ಮಾನವ ಹೃದಯ, ತಳವಿಲ್ಲದ ಬಾವಿ, ಕ್ಯಾಮರಾ, ಲೋಲಕ… ಹೀಗೆ 50ಕ್ಕೂ ಅಧಿಕ ಮಾದರಿಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಇವುಗಳ ತಯಾರಕರಾದ ವಿದ್ಯಾರ್ಥಿಗಳು ನೀಡುತ್ತಿದ್ದ ವಿವರಣೆ ನೋಡುಗರಲ್ಲಿ ಅಚ್ಚರಿ ಮೂಡಿಸಿತು.

    ಅಗಸ್ತ್ಯ ಫೌಂಡೇಷನ್‌ನ ನಿಜಗುಣ ಮಾದರ್ ಮಾತನಾಡಿ, ಮಕ್ಕಳಲ್ಲಿ ಕ್ರಿಯಾಶೀಲತೆ ವೃದ್ಧಿಸುವುದು, ವೈಜ್ಞಾನಿಕ ಮನೋಭಾವ ಹಾಗೂ ನಾಯಕತ್ವ ಗುಣ ಬೆಳೆಸುವುದು ವಿಜ್ಞಾನ ವಸ್ತುಪ್ರದರ್ಶನದ ಉದ್ದೇಶವಾಗಿದೆ ಎಂದರು.

    ಎಂ.ಕೆ.ತಿಪ್ಪೇಸ್ವಾಮಿ, ಚಂದ್ರಶೇಖರ್, ಮುಖಂಡ ಕೆ.ಟಿ.ಹನುಮಂತರೆಡ್ಡಿ, ಮ್ಯಾನೇಜರ್ ಫಣಿಧರ, ಬಿ.ಟಿ.ನಾಗಭೂಷಣ್, ಶಿಕ್ಷಕರಾದ ಓಂಕಾರಮ್ಮ, ಕೆ.ಎನ್.ಶ್ರೀವಾಣಿ, ಅನಿಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts