More

    ಗ್ರಾಮಾಭಿವೃದ್ಧಿಗೆ ಧರ್ಮಸ್ಥಳ ಸಂಸ್ಥೆ ನೆರವು

    ಕೊಂಡ್ಲಹಳ್ಳಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕಳೆದ ಮೂರು ದಶಕಗಳಿಂದ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುತ್ತಿದೆ ಎಂದು ಯೋಜನೆಯ ರೇಣುಕಾಪುರ ವಲಯ ಮೇಲ್ವಿಚಾರಕ ಮಂಜುನಾಥ್ ತಿಳಿಸಿದರು.

    ಯೋಜನೆ ವತಿಯಿಂದ ಗೌರಸಮುದ್ರ ಗ್ರಾಮದಲ್ಲಿ ಇತ್ತೀಚೆಗೆ ಅಂಗವಿಕಲರಿಗೆ ಉಚಿತ ವೀಲ್‌ಚೇರ್ ವಿತರಣೆ ಕಾರ್ಯ ಕ್ರಮದಲ್ಲಿ ಮಾತನಾಡಿದರು.

    ಯೋಜನೆ ಮೂಲಕ ಸಂಘದ ಸದಸ್ಯರಲ್ಲಿ ಶಿಸ್ತು, ಗುರಿ, ವ್ಯವಹಾರ ಜ್ಞಾನ, ಉತ್ತಮ ಬದುಕಿಗೆ ಸೂತ್ರಗಳ ಅಳವಡಿಕೆಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ ಎಂದರು.

    ಪ್ರಗತಿ ಬಂಧು ಯೋಜನೆ ಮೂಲಕ ರೈತ ಸಮುದಾಯದ ಸಂಘಟನೆ, ರೈತರಿಗೆ ತಾಂತ್ರಿಕ ತರಬೇತಿ, ಸರ್ಕಾರದ ಅನುದಾನ ಪಡೆಯಲು ಸಹಕಾರ, ದುಶ್ಚಟ ಮುಕ್ತ ಸಮಾಜ ನಿರ್ಮಾಣ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

    ಗೌರಸಮುದ್ರ ಒಕ್ಕೂಟದ ಅಧ್ಯಕ್ಷೆ ಸುಭಾಷಿಣಿ ಮಾತನಾಡಿ ಗ್ರಾಮೀಣ ಮಹಿಳೆಯ ರು ಪಡೆದ ಸಾಲ ಸದಬಳಕೆ ಮಾಡಿಕೊಳ್ಳುವ ಜತೆಗೆ ಸಕಾಲಕ್ಕ ಮರುಪಾವತಿಸುವಂತೆ ಸಲಹೆ ನೀಡಿದರು.

    ನಿರ್ಗತಿಕ ಮಹಿಳೆಯರಿಗೆ ಮಾಶಾಸನ, ಸಂಘದ ಸದಸ್ಯರ ಮಕ್ಕಳ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುತ್ತಿರುವುದು ಶ್ಲಾಘನೀಯ ಎಂದರು. ಮುಖಂಡ ಜಿ.ಪಿ.ರುದ್ರಾರೆಡ್ಡಿ, ಒಕ್ಕೂಟದ ಸದಸ್ಯರಾದ ಉಮಾ, ಶಿಲ್ಪಾ, ಲಕ್ಷ್ಮಿ, ಸಣ್ಣೀರಕ್ಕ, ಸೇವಾಪ್ರತಿನಿಧಿ ಮಾರಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts