More

    ಶರೀರ ದುಶ್ಟಟದ ಗೂಡಾಗದಿರಲಿ

    ಕೊಂಡ್ಲಹಳ್ಳಿ: ಮಾನವನ ದೇಹ ದೈವ ನೀಡಿದ ಕೊಡುಗೆ. ಇದು ದುಶ್ಚಟದ ಗೂಡಾಗದಂತೆ ಜಾಗ್ರತೆ ವಹಿಸಬೇಕು ಎಂದು ಸಿದ್ದಯ್ಯನಕೋಟೆಯ ಚಿತ್ತರಗಿ ವಿಜಯ ಮಹಾಂತೇಶ್ವರ ಶಾಖಾ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ತಿಳಿಸಿದರು.

    ಶ್ರೀ ಮಹಾಂತ ಶಿವಯೋಗಿಗಳ ಪುಣ್ಯಸ್ಮರಣೆ ಅಂಗವಾಗಿ ಕೊಂಡ್ಲಹಳ್ಳಿ ಗ್ರಾಮದ ತಿಮ್ಮಪ್ಪ ದೇವಸ್ಥಾನ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಬಸವತತ್ವ ಪ್ರಸಾರ ಮಹಾಂತ ಜೋಳಿಗೆ ಜನ ಜಾಗೃತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

    ದುಶ್ಚಟ, ಕೆಟ್ಟ ಬುದ್ಧ ತೊರೆದು ಜೀವಿಸಿದರೆ ಬದುಕು ಬಂಗಾರವಾಗಲಿದೆ. ಜೀವನದಲ್ಲಿ ಆಸೆಗಳು ಇರಬೇಕು. ದುರಾಸೆ ಇರಬಾರದು. ಮತ್ತೊಬ್ಬರಿಗೆ ಸಮಸ್ಯೆ ಮಾಡಿ ಯಾವ ಸಾಧನೆ ಮಾಡಿದರೂ ದೇವರ ಕೃಪೆ ಗಳಿಸಲು ಸಾಧ್ಯವಾಗದು ಎಂದರು.

    ಕುಟುಂಬದ ಒಳಿತು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವತ್ತ ಹೆಚ್ಚಿನ ಆದ್ಯತೆ ನೀಡಬೇಕು. ಶಿವ ಶರಣರು, ಮಹಾತ್ಮರು, ಸಂತರ ಜೀವನ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಹಳ್ಳಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದುಶ್ಚಟಗಳನ್ನು ಶ್ರೀಗಳು ಜೋಳಿಗೆಗೆ ಹಾಕಿಸಿಕೊಂಡು ನೆಮ್ಮದಿ ಬದುಕಿನ ಸಲಹೆಗಳನ್ನು ನೀಡಿದರು.

    ಬಸವಕೇಂದ್ರದ ಅಧ್ಯಕ್ಷ ಎಂ.ಬಿ.ಬೋಗೇಶ್ ಗೌಡ, ಕಲಾವಿದ ಶಿವಕುಮಾರ್ ಚೀಳಂಗಿ, ಯುವ ಮುಖಂಡ ಬಿ.ಟಿ.ಮಂಜುನಾಥ್, ಅಂಚೆಪಾಲಕ ಮಹೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts