More

    ಅಂಗನವಾಡಿ ಕಾರ್ಯಕರ್ತೆಯರಿಂದ ಅರಳಿಸಿದ ಕಲೆ

    ಕೊಂಡ್ಲಹಳ್ಳಿ: ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಆಹಾರ ಧಾನ್ಯಗಳನ್ನು ಬಳಸಿ ಚಿತ್ರ ಬರೆದು ತಮ್ಮ ಪ್ರತಿಭೆ ಪ್ರದರ್ಶಿಸಿದರು.

    ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳ ಸೂಚನೆಯಂತೆ ಕೇಂದ್ರದೊಳಗೆ ವಿವಿಧ ಚಿತ್ರಗಳನ್ನು ರಚಿಸಿದ್ದು, ತಾಯಿಯ ಮಡಿಲಿನಲ್ಲಿ ಮಗು ಇರುವ ಐಸಿಡಿಎಸ್ ಯೋಜನೆಯ ಚಿಹ್ನೆಯ ಚಿತ್ರ ಆಕರ್ಷಣೀಯವಾಗಿತ್ತು.

    ವಿವಿಧ ಗ್ರಾಮಗಳ ಕೇಂದ್ರಗಳಲ್ಲಿ ಓಂ, ಕರ್ನಾಟಕ ಭೂಪಟ, ಸ್ವಸ್ತಿಕ್ ಬಿಡಿಸಿದ್ದು, ಇದಕ್ಕಾಗಿ ಬೆಲ್ಲ, ಹೆಸರು, ಶೇಂಗಾ, ಕೋಳಿಮೊಟ್ಟೆ, ಅಕ್ಕಿ, ಕಡಲೆ, ಬೇಳೆ, ಹಾಲು ಪುಡಿ, ರಾಗಿ ಮಾಲ್ಟ್ ಬಳಸಿಕೊಂಡಿದ್ದಾರೆ.

    ಶಿಶು ಅಭಿವೃದ್ಧಿ ಯೋಜನೆಯ ಕೊಂಡ್ಲಹಳ್ಳಿ ವೃತ್ತದ ಮೇಲ್ವಿಚಾರಕಿ ಆರತಿ ಕಾಂಬ್ಳೆ ಮಾತನಾಡಿ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಜನರಿಗೆ ಪೌಷ್ಠಿಕಾಹಾರದ ಮಹತ್ವ ಸಾರಲು ಈ ಚಟುವಟಿಕೆ ಕೈಗೊಳ್ಳಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts