More

    ಬೈಕ್‌ನಿಂದಲೇ ಎಡೆ ಹೊಡೆದ ಯುವ ಕೃಷಿಕರು

    ಕುಕನೂರು: ತಾಲೂಕಿನ ಕೋಮಲಾಪುರ ಗ್ರಾಮದಲ್ಲಿ ಗಳೆವು ಬಾಡಿಗೆ ದಿನಕ್ಕೆ ಸಾವಿರದಿಂದ ಹನ್ನೆರಡು ನೂರು ರೂ.ಗೆ ಹೆಚ್ಚಿದ ಹಿನ್ನೆಲೆಯಲ್ಲಿ ಹಾಗೂ ಎತ್ತುಗಳ ಸಂಖ್ಯೆ ವಿರಳವಾಗಿದ್ದರಿಂದ ಗ್ರಾಮದ ಜಮೀನಿನಲ್ಲಿ ಯುವಕರು ಬೈಕ್‌ಗೆ ಕುಂಟೆ ಕಟ್ಟಿ ಬೈಕ್‌ನಿಂದ ಜಮೀನಿನಲ್ಲಿ ಎಡೆ ಹೊಡೆದರು.

    ಗ್ರಾಮದ ಯುವಕ ಮಹಾಂತೇಶಗೌಡ ಪೊಪಾ ತಮ್ಮ ಜಮೀನಿನಲ್ಲಿ ಈ ರೀತಿ ಕಾರ್ಯಕ್ಕೆ ಮುಂದಾಗಿದ್ದು, ಇವರ ತಮ್ಮಂದಿರಾದ ನೀಲನಗೌಡ, ಸಂತೋಷಗೌಡ ಪೊಪಾ ಕೈ ಜೋಡಿಸಿದ್ದಾರೆ. ಹೆಚ್ಚಿನ ಬಾಡಿಗೆಯಿಂದ ಬೇಸತ್ತಿರುವ ಅನ್ನದಾತರು ನೂತನ ಪ್ರಯೋಗಕ್ಕೆ ಮುಂದಾಗುತ್ತಿದ್ದಾರೆ. ಬೈಕ್‌ನ ಹಿಂಬದಿಗೆ ನೊಗದ ದಿನ್ನೆ ಕಟ್ಟಿ ಅದಕ್ಕೆ ಕುಂಟೆ ಕಟ್ಟಿ ಗಳೆವು ರೀತಿಯಲ್ಲಿ ತಯಾರಿಸಿದ್ದಾರೆ. 2 ಎಕರೆಗೆ 1.5 ಲೀಟರ್ ಡೀಸೆಲ್ ಖರ್ಚು ಆಗಿದೆ. ಇದರಿಂದ ಕಡಿಮೆ ವೆಚ್ಚ ತಗುಲುತ್ತದೆ ಅನ್ನುತ್ತಾರೆ ಯುವ ಕೃಷಿಕರು. ಅಲ್ಲದೆ ಬೆಳೆಯ ಅಂತರ ನಡುವಿನ ಕಳೆ ಮಾತ್ರವಲ್ಲದೆ, ಬೆಳೆಯ ಕಾಂಡಕ್ಕೆ ಮಣ್ಣು ಸಹ ಬೀಳುವ ರೀತಿಯಲ್ಲಿ ಬೈಕ್‌ನ ಗಳೆಯಿಂದ ಎಳೆಯಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts