More

    ಹೇರ್ ಕಲರಿಂಗ್‌ಗೆ ಎರಡನೇ ದಿನವೂ ಉತ್ತಮ ಸ್ಪಂದನೆ

    ಕೊಳ್ಳೇಗಾಲ: ಪಟ್ಟಣದ ಟಿಎಪಿಸಿಎಎಸ್ ರಸ್ತೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಗಾರ್ನಿಯರ್ ಕಂಪನಿಯಿಂದ ಆಯೋಜಿಸಿರುವ ಮೂರು ದಿನಗಳ ಉಚಿತ ಹೇರ್ ಕಲರಿಂಗ್ ಅಭಿಯಾನದಲ್ಲಿ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಮಹಿಳೆಯರು ಹಾಗೂ ಪುರುಷರು, ಯುವಕರು ನೂರಾರು ಸಂಖ್ಯೆಯಲ್ಲಿ ತಮ್ಮಿಚ್ಛೆಯ ಬಣ್ಣಗಳನ್ನು ಹಾಕಿಸಿಕೊಂಡು ಸಂತಸಪಟ್ಟರು.

    ಈ ವೇಳೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಬಿ. ವಲಯದ ಮೇಲ್ವಿಚಾರಕಿ ಕೆ.ಬಿ.ಪವಿತ್ರಾ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ರೇಖಾ, ಮೇಲ್ವಿಚಾರಕ ಪ್ರಕಾಶ್, ಆಂತರಿಕ ಲೆಕ್ಕಪರಿಶೋಧಕಿ ದೀಪ್ತಿ, ಸೇವಾ ಪ್ರತಿನಿಧಿಗಳಾದ ಪ್ರೇಮ ಶೀಲಾ, ಭಾಗ್ಯ, ದೀಪಿಕಾ, ನವೀನ್, ಪ್ರಮೀಳಾ, ನವೀನ್, ಶಾಂತಿ, ಇನ್ನಿತರ ಸ್ವಸಹಾಯ ಸದಸ್ಯರು ಹಾಜರಿದ್ದರು. ಈ ಉಚಿತ ಅಭಿಯಾನ ಬುಧವಾರವೂ ಇರಲಿದ್ದು, ಆಸಕ್ತ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

    ಈ ಕಾರ್ಯಕ್ರಮದಿಂದ ಬಗೆಬಗೆಯ ಹೇರ್ ಕಲರಿಂಗ್ ಪರಿಚಯವಾಯಿತು. ಸಂಘದ ಮಹಿಳೆಯರು ಬಹಳ ಖುಷಿಯಿಂದ ಉಚಿತವಾಗಿ ಹೇರ್ ಕಲರಿಂಗ್ ಮಾಡಿ ಸಿಕೊಂಡರು. ಇದೊಂದು ಉತ್ತಮವಾದ ಕಾರ್ಯಕ್ರಮ. ವಿಜಯವಾಣಿ ಹಾಗೂ ಗಾರ್ನಿಯರ್ ಕಂಪನಿಗೆ ಧನ್ಯವಾದಗಳನ್ನು ತಿಳಿಸಿಸುತ್ತೇನೆ.
    ಕೆ.ಬಿ. ಪವಿತ್ರಾ, ಮೇಲ್ವಿಚಾರಕಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts