More

    ಬೈಕ್‌ಗೆ ಕಾರು ಡಿಕ್ಕಿ, ಸವಾರನಿಗೆ ಗಾಯ

    ಕೊಳ್ಳೇಗಾಲ: ಪಟ್ಟಣದ ಮಧುವನಹಳ್ಳಿ ಗ್ರಾಮದ ಬಳಿ ಕಾರು-ಬೈಕ್ ಡಿಕ್ಕಿ ಸಂಭವಿಸಿ ಸವಾರ ಗಭೀರವಾಗಿ ಗಾಯಗೊಂಡಿದ್ದಾರೆ.

    ತಮಿಳುನಾಡಿನ ಪೆನ್ನಾನಗರ ತಾಲೂಕಿನ ದೊರೆಸ್ವಾಮಿ ಗಾಯಗೊಂಡವರು. ಇವರು ತಮ್ಮ ಬೈಕ್‌ನಲ್ಲಿ ಮಧುವನಹಳ್ಳಿಯತ್ತ ಬರುವಾಗ ಮೈಸೂರಿನ ಕಡೆಯಿಂದ ಚಿಕ್ಕಲ್ಲೂರಿಗೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ತಲೆ, ಕೈಕಾಲುಗಳಿಗೆ ಗಂಭೀರವಾಗಿ ಗಾಯವಾಗಿವಾಗಿದೆ. ಗಾಯಾಳುವಿಗೆ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕಳುಹಿಸಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಅಪಘಾತಕ್ಕೀಡಾದ ಎರಡೂ ವಾಹನಗಳನ್ನು ವಶಕ್ಕೆ ಪಡೆದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts