More

  ವಿಜೃಂಭಣೆಯ ಆರಿದ್ರಾ ಮಹೋತ್ಸವ

  ಕೊಳ್ಳೇಗಾಲ: ಪಟ್ಟಣದ ಶ್ರೀ ಮರಳೇಶ್ವರಸ್ವಾಮಿ ದೇವಾಲಯದಲ್ಲಿ ಶುಕ್ರವಾರ 59ನೇ ಸಂವತ್ಸರದ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.
  ಆರಿದ್ರೋತ್ಸವ ಸೇವಾ ಸಮಿತಿ ಸಂಚಾಲಕ ಎ.ಪಿ.ಅಯ್ಯಪ್ಪನ್ ನೇತೃತ್ವದಲ್ಲಿ ಬೆಳಗ್ಗೆ 6 ಗಂಟೆಯಿಂದ ದೇಗುಲದಲ್ಲಿ ಶ್ರೀ ಶಿವಕಾಮಿ ಸಮೇತ ನಟರಾಜಸ್ವಾಮಿಗೆ ಪಂಚಾಮೃತಾಭಿಷೇಕ, ಶಂಖಾಭಿಷೇಕ, ಕ್ಷೀರಾಭಿಷೇಕ, ವಿವಿಧ ಫಲಾಭಿಷೇಕ, ಸುಂಗಂಧ ದ್ರವ್ಯಾಭಿಷೇಕ, ನಾರಿಕೇಳಾಭಿಷೇಕ, ಅನ್ನಾಭಿಷೇಕ ಮತ್ತು ದೀಪಾರಾಧನೆ ಪೂಜಾ ಕೈಂಕರ್ಯಗಳು ನೆರವೇರಿದವು. 10 ಗಂಟೆಗೆ ಮಹಾಮಂಗಳಾರತಿ ಬೆಳಗಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
  ದೇಗುಲದ ಪ್ರಧಾನ ಅರ್ಚಕ ನಾಗೇಂದ್ರ ಎನ್.ಭಟ್, ಶಿವರಾಮಭಟ್, ರಾಮ್ ಕೌಷಿಕ್ ದೀಕ್ಷಿತ್ ಅವರನ್ನು ಒಳಗೊಂಡ ಸಹ ಅರ್ಚಕರ ತಂಡ ವಿವಿಧ ಪೂಜಾ ಕೈಂಕರ್ಯಗಳಲ್ಲಿ ನೆರೆವೇರಿಸಿತು. ಭಕ್ತರಿಗೆ ತೀರ್ಥ, ಲಾಡು ಹಾಗೂ ಅನ್ನ್ನ ಪ್ರಸಾದ ವಿತರಿಸಲಾಯಿತು.
  ಆರಿದ್ರೋತ್ಸವ ಪೂಜೆ ಬಳಿಕ ದೇಗುಲದಲ್ಲಿರುವ ಶ್ರೀ ಮರಳೇಶ್ವರಸ್ವಾಮಿ ಮತ್ತು ಮೀನಾಕ್ಷಿ ಅಮ್ಮನವರ ದೇಗುಲದಲ್ಲಿ ಭಕ್ತರು ಅರ್ಚನಾ ಪೂಜೆ ಸಲ್ಲಿಸಿದರು.
  ಶ್ರೀ ರಾಮಕೃಷ್ಣಾಶ್ರಮದ ಶಾರದ ಗಾನಸುಧೆ ತಂಡ ಶ್ರೀ ಸ್ವಾಮಿಯ ಅಷ್ಟೋತ್ತರ ಗೀತೆಗಳನ್ನು ಹಾಡಿ ಭಕ್ತಿ ಸುಧೆ ಹರಿಸಿತು. ಬ್ರಾಹ್ಮಣರ ಸಂಘದ ಅಧ್ಯಕ್ಷ ಶೇಖರಶಾಸ್ತ್ರಿಗಳ ನೇತೃತ್ವದಲ್ಲಿ ಚಂದ್ರಚೂಡ ಹಾಗೂ ಇತರರು ಮಂತ್ರೋಪದೇಶಗಳ ಪಠಣ ಮಾಡಿದರು.
  ಆರಿದ್ರೋತ್ಸವ ಅಂಗವಾಗಿ ದೇಗುಲಗಳನ್ನು ಹಸಿರು ತಳಿರು ತೋರಣ, ಬಗೆ ಬಗೆಯ ಪುಷ್ಪಗಳು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಶಾಸಕ ಎನ್.ಮಹೇಶ್, ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಎಸ್.ಜೆ.ಕೃಷ್ಣ, ಆರ‌್ಯ ವೈಶ್ಯ ಸಂಘದ ಗೌರವಾಧ್ಯಕ್ಷ ವೇಣುಗೋಪಾಲ್, ಲಯನ್ಸ್ ವಿದ್ಯಾಸಂಸ್ಥೆ ಸದಸ್ಯ ಪಿ.ಜಿ.ಶಶಿಧರ್, ವೈದ್ಯರಾದ ಡಾ.ಪಿ.ಜಿ.ಶ್ರೀಧರ್, ಡಾ.ಬಿಜು, ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಈಶ್ವರ್, ದೇವಾಂಗ ಸಮಾಜದ ಹಿರಿಯ ಮುಖಂಡ ಅಚ್ಗಾಳ್ ನಾಗರಾಜಯ್ಯ, ನಗರಸಭಾ ಸದಸ್ಯರಾದ ಜಿ.ಪಿ.ಶಿವಕುಮಾರ್, ಶಂಕರ್ ನಾರಾಯಣಗುಪ್ತ, ಎ.ಪಿ.ಶಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್ ಇತರರು ಭಾಗವಹಿಸಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts