More

    ಕೊಕಟನೂರ ಜಾತ್ರೆಗೆ ಸೌಕರ್ಯ ಕಲ್ಪಿಸಿ

    ಅಥಣಿ ಗ್ರಾಮೀಣ: ಕೊಕಟನೂರ ಜಾತ್ರೆಯಲ್ಲಿ ಪ್ರಾಣಿಬಲಿ, ವಿದ್ಯುತ್ ಕೊರತೆ ಆಗದಂತೆ ನೋಡಿಕೊಳ್ಳುವದು, ಸಿಸಿಟಿವಿ ಅಳವಡಿಕೆ, ಸುಗಮ ಸಂಚಾರ ಸೇರಿ ಮೂಲಭೂತ ಸೌಕರ್ಯ ಒದಗಿಸಲು ಕಾರ್ಯನಿರ್ವಹಿಸಬೇಕು ಎಂದು ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೆ ಹೇಳಿದರು.

    ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಶ್ರೀ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದ ಬಳಿ ಇರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜ. 6ರಿಂದ 12ರ ವೆರೆಗೆ ಜಾತ್ರೆ ಜರುಗಲಿದೆ. ಇಲ್ಲಿರುವ ವೈನ್ ಅಂಗಡಿ ರಾತ್ರಿ 10ರ ನಂತರ ತೆರೆಯದಂತೆ ಕಟ್ಟು ನಿಟ್ಟಿನ ನಿಯಮ ಪಾಲಿಸಬೇಕು, ಜಾತ್ರೆಯ ಪ್ರಾಂಗಣದಲ್ಲಿರುವ ಹೋಟೆಲ್ ಪಾನ್‌ಶಾಪ್‌ಗಳಲ್ಲಿ ಮದ್ಯ ಮಾರಾಟವಾಗದಂತೆ ನೋಡಿಕೊಳ್ಳಬೇಕು. ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಯಾತ್ರಿಕರು ಹಾಗೂ ಅಂಗಡಿಕಾರರು ಮೈಕ್ ಹಚ್ಚಿ ಶಬ್ದ ಮಾಲಿನ್ಯ ಮಾಡದಂತೆ ಕ್ರಮಕೈಗೊಳ್ಳಬೇಕು ಎಂದರು. ಅಕ್ರಮ ತಡೆಯಲು ಚೆಕ್‌ಪೋಸ್ಟ್ ಅಳವಡಿಸಲು ಅಬಕಾರಿ ಇಲಾಖೆಯವರಿಗೆ ಸೂಚಿಸಿದವರು.

    ತಹಸೀಲ್ದಾರ್ ವಾಣಿ ಯು. ಮಾತನಾಡಿ, ಜಾತ್ರೆ ಯಶಸ್ವಿಯಾಗಲು ಕಟ್ಟುನಿಟ್ಟಿನ ಕ್ರಮ ಅನಿವಾರ್ಯ. ಪ್ರಾಣಿ ಬಲಿ, ಬಳೆ ಒಡೆಯುವದು, ಮುತ್ತುಕಟ್ಟುವದು ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

    ಸಿಪಿಐ ರವೀಂದ್ರ ನಾಯ್ಕೋಡಿ, ಸಿಡಿಪಿಒ ಅಶೋಕ ಕಾಂಬಳೆ, ಅಥಣಿ ಕೆಎಸ್‌ಆರ್‌ಟಿಸಿ ಘಟಕ ವ್ಯಸ್ಥಾಪಕ ನಿಜಗುಣಿ ಕೇರಿ ಮಾತನಾಡಿದರು.

    ಗ್ರಾಪಂ ಅಧ್ಯಕ್ಷೆ ಶಾನವ್ವ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕಾವೈದ್ಯಾಧಿಕಾರಿ ಬಸಗೌಡ ಕಾಗೆ, ಜಿಪಂ ಎಇಇ ಈರಣ್ಣ ವಾಲಿ, ಅಬಕಾರಿ ಇಲಾಖೆ ಅಧಿಕಾರಿ ಮಹಾಂತೇಶ ಬಂಡಗರ, ಶಿರಸ್ತೆದಾರ ಮಹಾದೇವ ಪಾಟೀಲ, ತಾಪಂ ಅಧಿಕಾರಿ ಮೈಬುಬ್ ಖೋತ್ವಾಲ್, ಕಂದಾಯ ನಿರೀಕ್ಷಕ ಮುಬಾರಕ ಮುಜಾವರ, ಗ್ರಾಮಾಡಳಿತಾಧಿಕಾರಿ ಕಲ್ಮೇಶ ಕಲಮಡಿ, ಜಿಪಂ ಮಾಜಿ ಸದಸ್ಯ ಪ್ರಲ್ಹಾದ ಪೂಜಾರಿ, ಪಿಎಸ್‌ಐ ರಾಕೇಶ ಬಗಲಿ, ಬಾಳಾಸಾಬ ಪೂಜಾರಿ, ಪ್ರಭಾಕರ ಚವ್ಹಾಣ, ಕೆಪಿಸಿಸಿ ಸದಸ್ಯ ಶಾಮರಾವ್ ಪೂಜಾರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts