More

    ಕೊಕಟನೂರ ಜಾತ್ರೆಗೆ ನೀರಿನ ಸಮಸ್ಯೆ?

    ಅಥಣಿ: ಉತ್ತರ ಕರ್ನಾಟಕದ ಅತಿದೊಡ್ಡ ಜಾತ್ರೆಗಳಲ್ಲಿ ಒಂದಾದ ಅಥಣಿ ತಾಲೂಕಿನ ಕೊಕಟನೂರ ರೇಣುಕಾ ಯಲ್ಲಮ್ಮದೇವಿ ಜಾತ್ರೆಯು ಜನವರಿಯಲ್ಲಿ ಮೊದಲ ವಾರದಿಂದ ಒಂದು ವಾರ ಜರುಗಲಿದ್ದು, ಬರ ಇರುವುದರಿಂದ ಜಾತ್ರೆಯಲ್ಲಿ ಪಾಲ್ಗೊಳ್ಳುವ ಲಕ್ಷಾಂತರ ಭಕ್ತರಿಗೆ ನೀರಿನ ವ್ಯವಸ್ಥೆ ಕಲ್ಪಿಸುವುದು ಜಾತ್ರಾ ಕಮಿಟಿ, ಗ್ರಾಪಂ ಹಾಗೂ ತಾಲೂಕಾಧಿಕಾರಿಗಳಿಗೆ ಸವಾಲಾಗುವ ಸಂಭವವಿದೆ.

    ಜ.6 ರಿಂದ 12ರವರೆಗೆ ವಿಶೇಷ ಕಾರ್ಯಕ್ರಮಗಳು ಜರುಗಲಿದ್ದು, ದೇವಸ್ಥಾನಕ್ಕೆ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿ ವಿವಿಧ ರಾಜ್ಯಗಳಿಂದ 5 ರಿಂದ 6 ಲಕ್ಷ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ. ಅದರಲ್ಲಿ ಕೆಲ ಭಕ್ತರು ದೇವಸ್ತಾನದ ಸುತ್ತಮುತ್ತಲಿನ ಖಾಲಿ ಜಾಗದಲ್ಲಿ ಟೆಂಟ್ ಹಾಕಿಕೊಂಡು ಒಂದು ವಾರ ವಾಸ್ತವ್ಯ ಹೂಡುತ್ತಾರೆ. ಯಲ್ಲಮ್ಮವಾಡಿ ಕೆರೆ ಬತ್ತಿದ ಪರಿಣಾಮ ಭಕ್ತರಿಗೆ ನೀರಿನ ಸಮಸ್ಯೆ ತಲೆದೋರಲಿದೆ. ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದೆ ಇರುವುದರಿಂದ ದೇವಸ್ಥಾನ ಸುತ್ತಮುತ್ತಲಿನ ಕೊಳವೆಬಾವಿ, ತೆರೆದ ಬಾವಿಗಳಲ್ಲಿಯೂ ಕೂಡ ನೀರಿನ ಅಭಾವ ಉಂಟಾಗಿದೆ. ಭಕ್ತರ ಸ್ನಾನಕ್ಕಾಗಿ ಹೊಂಡ ನಿರ್ಮಿಸಿ ಯಲ್ಲಮ್ಮವಾಡಿ ಕೆರೆಯಿಂದ ಪ್ರತಿವರ್ಷ ನೀರು ಹರಿಬಿಡಲಾಗುತ್ತಿತ್ತು. ಆದರೆ, ಈ ಬಾರಿ ನೀರಿನ ಅಭಾವ ಇರುವುದರಿಂದ ಭಕ್ತರಿಗೆ ಸ್ನಾನಕ್ಕೆ ಹಾಗೂ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಲಿದೆ.

    ತುಂಗಳ-ಸಾವಳಗಿ ಏತ ನೀರಾವರಿ ಕಾಲುವೆ ಮೂಲಕ ಯಲ್ಲಮ್ಮವಾಡಿ ಕೆರೆಗೆ ನೀರು ಹರಿಬಿಟ್ಟರೆ ಮಾತ್ರ ಜಾತ್ರೆಗೆ ಆಗಮಿಸುವ ಭಕ್ತರಿಗೆ ಅನುಕೂಲವಾಗುತ್ತದೆ. ಇಲ್ಲವಾದರೆ ಸ್ಥಳೀಯ ಗ್ರಾಪಂ, ತಾಲೂಕಾಡಳಿತ ಪರ್ಯಾಯ ವ್ಯವಸ್ಥೆ ಮಾಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts