More

    VIDEO: ಪ್ರಸಕ್ತ ಐಪಿಎಲ್ ಬಳಿಕ ಆರ್‌ಸಿಬಿ ನಾಯಕತ್ವಕ್ಕೂ ಕೊಹ್ಲಿ ಗುಡ್‌ಬೈ

    ಬೆಂಗಳೂರು: ಹಾಲಿ ಆವೃತ್ತಿಯ ಐಪಿಎಲ್ ಟೂರ್ನಿಯ ಬಳಿಕ ಆರ್‌ಸಿಬಿ ತಂಡದ ನಾಯಕತ್ವ ತ್ಯಜಿಸುವುದಾಗಿ ವಿರಾಟ್ ಕೊಹ್ಲಿ ಭಾನುವಾರ ಪ್ರಕಟಿಸಿದ್ದಾರೆ. ಮುಂಬರುವ ಟಿ20 ವಿಶ್ವಕಪ್ ಬಳಿಕ ಭಾರತ ಟಿ20 ತಂಡದ ನಾಯಕತ್ವ ತ್ಯಜಿಸುವುದಾಗಿ ಅವರು ಇತ್ತೀಚೆಗಷ್ಟೇ ಹೇಳಿದ್ದರು. ಇದೀಗ ಆರ್‌ಸಿಬಿ ನಾಯಕತ್ವದಿಂದಲೂ ನಿರ್ಗಮಿಸುವುದರಿಂದ ಅವರು, ಚುಟುಕು ಕ್ರಿಕೆಟ್ ತಂಡಗಳ ಸಾರಥ್ಯದಿಂದ ಸಂಪೂರ್ಣ ದೂರ ಉಳಿದಂತಾಗಿದೆ. 2008ರ ಮೊದಲ ಆವೃತ್ತಿಯಿಂದಲೂ ಆರ್‌ಸಿಬಿ ತಂಡದ ಆಟಗಾರರಾಗಿರುವ ವಿರಾಟ್ ಕೊಹ್ಲಿ, 2013ರಿಂದ ತಂಡದ ಪೂರ್ಣ ಪ್ರಮಾಣದ ನಾಯಕರಾಗಿದ್ದಾರೆ.

    2016ರಲ್ಲಿ ರನ್ನರ್‌ಅಪ್ ಆಗಿದ್ದು ಅವರ ಸಾರಥ್ಯದಲ್ಲಿ ಆರ್‌ಸಿಬಿ ತೋರಿದ ಶ್ರೇಷ್ಠ ನಿರ್ವಹಣೆಯಾಗಿದೆ. ಪ್ರಸಕ್ತ ವರ್ಷದ ಐಪಿಎಲ್ ಮೊದಲ ಭಾಗದಲ್ಲಿ ಭರ್ಜರಿ ನಿರ್ವಹಣೆ ತೋರಿದ್ದ ಆರ್‌ಸಿಬಿ, 2ನೇ ಭಾಗದಲ್ಲೂ ಅಂಥದ್ದೇ ಪ್ರದರ್ಶನ ಮುಂದುವರಿಸಿದರೆ ಕೊಹ್ಲಿ ನಾಯಕತ್ವಕ್ಕೆ ಪ್ರಶಸ್ತಿ ಗೆಲುವಿನ ವಿದಾಯ ನೀಡಬಹುದಾಗಿದೆ. ಆರ್‌ಸಿಬಿ ತಂಡದ ನಾಯಕನಾಗಿ ಇದೇ ನನ್ನ ಕಡೇ ಆವೃತ್ತಿಯಾಗಿದ್ದರೂ, ನನ್ನ ಕ್ರಿಕೆಟ್ ಜೀವನದ ಕಡೇ ದಿನದವರೆಗೂ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪರ ಆಡುವೆ ಎಂದು 32 ವರ್ಷದ ಕೊಹ್ಲಿ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ‘ಆರ್‌ಸಿಬಿಯಲ್ಲಿ ಜರ್ನಿ ಅದ್ಭುತವಾಗಿದ್ದು, ಪ್ರತಿಭಾನ್ವಿತ ಆಟಗಾರರಿಂದ ಕೂಡಿದೆ. ಆರ್‌ಸಿಬಿ ಆಡಳಿತ ಮಂಡಳಿಗೆ, ಕೋಚ್‌ಗಳಿಗೆ, ಸಹಾಯಕ ಸಿಬ್ಬಂದಿ, ಇಡೀ ಆರ್‌ಸಿಬಿ ಕುಟುಂಬಕ್ಕೆ ಧನ್ಯವಾದ ಅರ್ಪಿಸುತ್ತೇನೆ’ ಎಂದು ಕೊಹ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts