ಅಪಾಯಕ್ಕೆ ಆಹ್ವಾನಿಸುತ್ತಿವೆ ಗುಂಡಿಗಳು

ಶನಿವಾರಸಂತೆ: ಖಾಸಗಿ ಮೊಬೈಲ್ ನೆಟ್‌ವರ್ಕ್ ಕೇಬಲ್ ಅಳವಡಿಕೆಯಿಂದ ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿದೆ. ಕೇಬಲ್ ಅಳವಡಿಕೆಗೆ ತೆಗೆದಿರುವ ಗುಂಡಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.

ಶನಿವಾರಸಂತೆ ಸೇರಿದಂತೆ ಕೊಡ್ಲಿಪೇಟೆಯಿಂದ ಸೊಮವಾರಪೇಟೆಯವರೆಗೆ ಜೀಯೊ ನೆಟ್‌ವರ್ಕ್ ಕೇಬಲ್ ಅಳವಡಿಕೆ ಕೆಲಸ ಭರದಿಂದ ಸಾಗುತ್ತಿದೆ. ಕೇಬಲ್ ಸುರಂಗದಲ್ಲಿ ನೀರು ತುಂಬಿ ಕೆರೆಯಂತಾದರೆ, ಇನ್ನು ಕೆಲವೆಡೆ ಗುಂಡಿಯ ಸುತ್ತ ಗಿಡಗಂಟಿ ಬೆಳೆದು ಗುಂಡಿ ಕಾಣದೆ ಮಕ್ಕಳು ಹಾಗೂ ಬೈಕ್ ಸವಾರರೂ ಗುಂಡಿಗೆ ಬಿದ್ದು ಏಳುವುದು ಸಾಮಾನ್ಯವಾಗಿದೆ.

ಪ್ರತಿ ಒಂದು ಕಿಲೋಮೀಟರ್‌ಗೆ 5*5 ಅಡಿ ಗುಂಡಿಗಳನ್ನು ಬದಿಯಲ್ಲಿ ತೆಗೆದು ಆ ನಂತರ ಅಲ್ಲಿಂದ ಸುರಂಗಮಾಡಿ ಕೇಬಲ್ ಅಳವಡಿಸಬೇಕು. ಅದರೆ ಆ ಗುಂಡಿಗಳನ್ನು ವ್ಯವಸ್ಥಿತವಾಗಿ ಮುಚ್ಚದೆ ಅವೈಜ್ಞಾನಿಕವಾಗಿ ತೆಗೆದು ಮುಚ್ಚಿರುವುದರಿಂದ ಮಳೆಗೆ ಗುಂಡಿಗೆ ಹಾಕಿರುವ ಮಣ್ಣು ಸಂಪೂರ್ಣವಾಗಿ ಕುಸಿದು ಕೆಲವೆಡೆ ನೀರು ತುಂಬಿದೆ. ಸುರಂಗವನ್ನು ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ತೆರೆದಿರುವುದರಿಂದ ಚರಂಡಿಯಲ್ಲಿ ಹರಿಯಬೇಕಾದ ಮಳೆಯ ನೀರು ಮುಖ್ಯ ರಸ್ತೆಯಲ್ಲಿ ಹರಿಯುತ್ತಿದೆ.

ಇದು ಸಾಲದೆಂಬಂತೆ ಶಾಲಾ ಮಕ್ಕಳು ಹಾಗೂ ವಾಹನ ಸವಾರರು ಪ್ರತಿನಿತ್ಯ ಗುಂಡಿ ಕಾಣದೆ ಬಿದ್ದು ಏಳುತ್ತಿದ್ದಾರೆ. ಅದೂ ಅಲ;್ಲದೆ ಸ್ಥಳೀಯ ಗುತ್ತಿಗೆದಾರರಿಗೆ ಕೇಬಲ್ ಅಳವಡಿಕೆಗೆ ಗುತ್ತಿಗೆ ನೀಡದ ಹಿನ್ನೆಲೆಯಲ್ಲಿ ಸಮಸ್ಯೆ ಇನ್ನೂ ಹೆಚ್ಚಿದೆ.

Leave a Reply

Your email address will not be published. Required fields are marked *