More

    ಜುಲೈ 4 ವರೆಗೆ ಅರ್ಧದಿನ ವಹಿವಾಟು

    ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಏರಿಕೆ ಹಿನ್ನೆಲೆ

    ಮಡಿಕೇರಿ: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಏರಿಕೆ ಹಿನ್ನೆಲೆ ಜೂ.27 ರಿಂದ ಜುಲೈ 4ರವರೆಗೆ ಬೆಳಗ್ಗೆ 6 ರಿಂದ 2 ಗಂಟೆವರೆಗೆ ಮಾತ್ರ ವ್ಯಾಪಾರ ಮಾಡಬೇಕು ಎಂದು ಕರೆ ನೀಡಿದ್ದ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನಿರ್ಣಯಕ್ಕೆ ಮಡಿಕೇರಿ ನಗರದಲ್ಲಿ ಶನಿವಾರ ಉತ್ತಮ ಬೆಂಬಲ ವ್ಯಕ್ತವಾಯಿತು.
    ಶನಿವಾರ ಮುಂಜಾನೆಯಿಂದ ನಗರ ಸೇರಿದಂತೆ ವಿವಿಧೆಡೆ ಎಂದಿನಂತೆ ಜನರು ನಗರಕ್ಕೆ ಆಗಮಿಸಿ ದೈನಂದಿನ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಮಧ್ಯಾಹ್ನ 2 ಗಂಟೆ ನಂತರ ಮಡಿಕೇರಿ ನಗರದ ಪ್ರಮುಖ ಬೀದಿಗಳಲ್ಲಿ ಶೇ.50 ರಷ್ಟು ಅಂಗಡಿ ಮಳಿಗೆಗಳು ಮುಚ್ಚಿದವು. ನಂತರ ನಿಧಾನವಾಗಿ 3 ಗಂಟೆ ವೇಳೆಗೆ ಶೇ.90 ರಷ್ಟು ಅಂಗಡಿ ಮಾಲೀಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದರು.
    ಮಧ್ಯಾಹ್ನದ ನಂತರ ಮಡಿಕೇರಿ ನಗರದಲ್ಲಿ ಹೆಚ್ಚಿನ ಜನಸಂದಣಿ ಕಂಡು ಬರಲಿಲ್ಲ. ಬಸ್ ನಿಲ್ದಾಣ, ಇಂದಿರಾಗಾಂಧಿ ವೃತ್ತ, ತಿಮ್ಮಯ್ಯ ವೃತ್ತ, ಮಹದೇವಪೇಟೆ ರಸ್ತೆ ಬಿಕೋ ಎನ್ನುತ್ತಿದ್ದವು. ಬೆಳಗ್ಗೆಯೇ ನಗರಕ್ಕೆ ಆಗಮಿಸಿದ್ದ ಜನತೆ, ಅಗತ್ಯ ಸಾಮಗ್ರಿ ಕೊಂಡು ಮನೆ ಸೇರಿದರು. ಪೊಲೀಸರು ನಿರಂತರವಾಗಿ ಗಸ್ತು ತಿರುಗುವುದರ ಮೂಲಕ ಜನತೆ ಗುಂಪುಗೂಡದಂತೆ ಮಾಸ್ಕ್ ಧರಿಸುವಂತೆ ಸೂಚಿಸುತ್ತಿದ್ದರು.
    ಕುಶಾಲನಗರ ವರದಿ: ಕುಶಾಲನಗರದ ವರ್ತಕರ ಸಂಘದ ಸ್ವಯಂ ಘೋಷಿತ ಲಾಕ್‌ಡೌನ್‌ಗೆ ವರ್ತಕರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಮಧ್ಯಾಹ್ನ 2.30 ಗಂಟೆ ಬಳಿಕ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts