More

    ಬಸ್‌ನಲ್ಲಿ ಮೊಳಗಿದ ಕನ್ನಡ ಸಂಭ್ರಮ

    ಕೊಡೇಕಲ್: ಗ್ರಾಮದಿಂದ ನಿತ್ಯ ನೆರೆ ರಾಜ್ಯವಾದ ಮಹಾರಾಷ್ಟçದ ಕೊಲ್ಹಾಪುರಕ್ಕೆ ತೆರಳುವ ವಾಯುವ್ಯ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಚಾಲಕ ಗದ್ದೆಪ್ಪ ನಾಗಾವಿ ಮತ್ತು ನಿರ್ವಾಹಕ ಯಲ್ಲಪ್ಪ ನಾಯಕ ಕನ್ನಡ ರಾಜ್ಯೋತ್ಸವ ವಿಶೇಷವಾಗಿ ಆಚರಿಸುವ ಮೂಲಕ ಕನ್ನಡಾಭಿಮಾನ ಮರೆದರು.

    ಇವರಿಗೆ ಸ್ಥಳೀಯ ಕರವೇ ಪದಾಧಿಕಾರಿಗಳು, ಖಾಸಗಿ ವಾಹನ ಚಾಲಕರ ಸಂಘದ ಸದಸ್ಯರು, ಗ್ರಾಮಸ್ಥರು ಸಾಥ್ ನೀಡುವ ಮೂಲಕ ಮತ್ತಷ್ಟು ಮೆರಗು ತಂದುಕೊಟ್ಟರು.

    ಬುಧವಾರ ಬೆಳಗ್ಗೆ ಚಾಲಕ ಮತ್ತು ನಿರ್ವಾಹಕ ಇಬ್ಬರು ಒಟ್ಟಿಗೆ ಕೂಡಿ ಇಡೀ ಬಸ್‌ನ್ನು ಹೂಗಳಿಂದ ಅಲಂಕರಿಸಿದರು. ಅಲ್ಲದೆ ಬಸ್‌ನ ಒಳಗೆ ಮತ್ತು ಹೊರಗೆ ಕನ್ನಡಾಂಬೆಯ ಧ್ವಜವನ್ನು ಹಚ್ಚುವ ಮೂಲಕ ಕನ್ನಡಾಭಿಮಾನ ಎಷ್ಟಿದೆ ಎಂಬುದು ತಮ್ಮ ಕಾಯಕದಿಂದಲೇ ತೋರಿಸಿಕೊಟ್ಟರು.

    ನಂತರ ನಡೆದ ಕಾರ್ಯಕ್ರಮದಲ್ಲಿ ಆರ್‌ಟಿಜೆ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹನುಮಂತ ನಾಯಕ ಕನ್ನಡಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ೬ ವರ್ಷದಿಂದ ಸರ್ಕಾರಿ ಬಸ್‌ನಲ್ಲಿ ವಿಶಿಷ್ಟವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿರುವ ಚಾಲಕ ಮತ್ತು ನಿರ್ವಾಹಕರ ಕರ‍್ಯ ಶ್ಲಾಘನೀಯ ಎಂದರು.

    ರಥದAತೆ ಕಂಗೊಳಿಸುತ್ತಿದ್ದ ಬಸ್ಸಿಗೆ ಧ್ವನಿ ವರ್ಧಕ ಅಳವಡಿಸಿ ಕನ್ನಡಾಭಿಮಾನ ಬಿಂಬಿಸುವ ಗೀತೆಯನ್ನು ಬಿತ್ತರಿಸುತ್ತಾ ಕೊಲ್ಹಾಪುರಕ್ಕೆ ಪ್ರಯಾಣ ಬೆಳೆಸಿತು. ಈ ಸಂಭ್ರಮಕ್ಕೆ ಗ್ರಾಮದ ಯುವಕರು ಬಬಲುಗೌಡ ನೇತೃತ್ವದಲ್ಲಿ ಸಾಥ್ ನೀಡುವ ಮೂಲಕ ಬಸ್‌ನ ಮುಂದೆ ಕೆಲ ಹೊತ್ತು ಬೈಕ್ ರ‍್ಯಾಲಿ ನಡೆಸಿದರು.

    ಕರವೇ ತಾಲೂಕು ಅಧ್ಯಕ್ಷ ರಮೇಶ ಬಿರಾದಾರ, ಗೌರಾವಾಧ್ಯಕ್ಷ ಶಿವರಾಜ ಹೊಕ್ರಾಣಿ, ಉಪಾಧ್ಯಕ್ಷ ದೇವರಾಜ ಪಾಟೀಲ್ ಕರ‍್ಯದರ್ಶಿ ಅಮರೇಶ ನೂಲಿ, ವಲಯ ಅಧ್ಯಕ್ಷ ರಮೇಶ ಪೂಜಾರಿ, ಸಂತೋಷ ಬಡಿಗೇರ, ಆಮಯ್ಯ ಮುತ್ಯಾ, ಸಿದ್ರಾಮ ತುಂಬಗಿ, ಮದನು ಸಾಲವಾಡಗಿ, ತಿಪ್ಪಣ್ಣ ಉಪ್ಪದಿನ್ನಿ, ಮಹೇಶ, ಹಲಕಲ್ಲಗೌಡ, ಮೌನೇಶ ಭಜಂತ್ರಿ, ವಿರೇಶ ದೊಡಮನಿ, ಸಂಗನಬಸ್ಸು ಪಂಜಗಲ್, ಯಲ್ಲಪ್ಪ ಜಿರಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts