More

    ಅತಿ ಹೆಚ್ಚು ಗ್ರಾಹಕರನ್ನು ಹೊಂದಿದ ಅಂಚೆ ಇಲಾಖೆ

    ಕೊಡೇಕಲ್: ಈ ಮೊದಲು ಅಂಚೆ ಇಲಾಖೆ ಕೇವಲ ಸಂಪರ್ಕ ಸಾಧನಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಇಲಾಖೆ ನೂರಕ್ಕೂ ಹೆಚ್ಚು ಸೇವೆ ಗ್ರಾಹಕರಿಗೆ ಒದಗಿಸುವ ಮೂಲಕ ಜಗತ್ತಿನಲ್ಲಿಯೇ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಯಾದಗಿರಿ ವಿಭಾಗದ ಅಂಚೆ ಅಧೀಕ್ಷಕ ಶಿವಾನಂದ ಆರ್.ಎಚ್.ಹೇಳಿದರು.

    ಹಗರಟಗಿಯಲ್ಲಿ ಭಾರತೀಯ ಅಂಚೆ ಇಲಾಖೆ, ಯಾದಗಿರಿ ವಿಭಾಗ ಮತ್ತು ಸುರಪುರ ಉಪವಿಭಾಗ ಕಚೇರಿಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡ ಅಂಚೆ ಜನ ಸಂಪರ್ಕ ಅಭಿಯಾನದಲ್ಲಿ ಮಾತನಾಡಿದ ಅವರು, ದೇಶದ ಪ್ರತಿ ಊರುಗಳಲ್ಲಿ ಅಂಚೆ ಕಚೇರಿಗಳಿವೆ. ೧೬೯ ವರ್ಷದಿಂದ ಕಾರ‍್ಯನಿರ್ವಹಿಸುತ್ತಿರುವ ಈ ಇಲಾಖೆ ಪತ್ರ ವ್ಯವಹಾರಗಳಿಂದ ಆರಂಭವಾಗಿ ಇಲ್ಲಿಯವರೆಗೆ ಸಾಕಷ್ಟು ಬದಲಾವಣೆ ಕಂಡು ಠೇವಣಿ ಜಮೆ, ಬ್ಯಾಂಕ್ ಖಾತೆ, ಜೀವ ವಿಮಾ ಪಿಂಚಣಿ, ಪ್ರಧಾನ ಮಂತ್ರಿ ಸುರಕ್ಷಾ, ಸುಕನ್ಯಾ ಸಮೃದ್ಧಿ ಖಾತೆ ಸೇರಿ ಹತ್ತು ಹಲವು ಯೋಜನೆಗಳನ್ನು ಜನರ ಜೀವಕ್ಕೆ ಭದ್ರೆತೆ ಒದಗಿಸುತ್ತಿದೆ ಎಂದರು.

    ಬಸವಪೀಠಾಧಿಪತಿ ಶ್ರೀ ವೃಷಭೇಂದ್ರ ಅಪ್ಪ ಕಾರ‍್ಯಕ್ರಮ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷ ರಾಯನಗೌಡ ಮಾಲಿ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಸುರಪುರ ಉಪ ವಿಭಾಗದ ಅಂಚೆ ನಿರೀಕ್ಷಕ ವಂಶಿ ರಾಮಕೃಷ್ಣ, ಪೋಸ್ಟ್​ ಮಾಸ್ಟರ್ ಕುಪೇಂದ್ರ ವಠಾರ, ಬಸವರಾಜ ಅಂಗಡಿ, ಅನಿಲ್ ಬಿರಾದಾರ, ಹಣಮಂತ ಹಳಿಗುರಿ, ಎಸ್.ಎನ್.ನಾಯಕೋಡಿ, ಚನ್ನಪ್ಪ, ವಿಶ್ವಾರಾಧ್ಯ, ಲಕ್ಷ್ಮಣ, ನಾರಾಯಣ ಚಿಲ್ಲಾಳ ಇತರರಿದ್ದರು.

    ಶಾಲಾ ಮಕ್ಕಳು ಪ್ರಾರ್ಥನೆ ನಡೆಸಿಕೊಟ್ಟರು. ಶಂಕರಾಚಾರ್ಯ ಸ್ವಾಗತಿಸಿದರು. ಪ್ರಭುಲಿಂಗ ಹಿರೇಮಠ ವಂದಿಸಿದರು. ಕುಪೇಂದ್ರ ವಠಾರ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts