More

    ಸ್ವಚ್ಛ ಭಾರತ ಪರಿಕಲ್ಪನೆ ಅರಿಯಿರಿ

    ದೇವದುರ್ಗ: ಉತ್ತಮ ಆರೋಗ್ಯಕ್ಕಾಗಿ ಸಮೃದ್ಧ ಪರಿಸರ ಬೆಳೆಸಲು ಪ್ರತಿಯೊಬ್ಬರಿಗೂ ಸ್ವಚ್ಛ ಭಾರತ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ಕ್ಷಯ ರೋಗ ಮೇಲ್ವಿಚಾರಕ ರವಿಶುಕ್ಲ ಹೇಳಿದರು.

    ಇದನ್ನೂ ಓದಿ: ಸ್ವಚ್ಛ ಭಾರತ ಕಾಗದದಲ್ಲಿ ಉಳಿಯದಿರಲಿ  -ಶಾಸಕ ಕೆ.ಎಸ್. ಬಸವಂತಪ್ಪ -ಜಿಲ್ಲಾಡಳಿತದಿಂದ ಗಾಂಧೀಜಿ- ಶಾಸ್ತ್ರೀಜಿ ಜಯಂತಿ 

    ತಾಲೂಕಿನ ಗಬ್ಬೂರು ಗ್ರಾಮದ ಶ್ರೀೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಆವರಣದಲ್ಲಿ ಯುವ ಬ್ರಿಗೇಡ್‌ನಿಂದ ಆಯೋಜಿಸಿದ್ದ 189ನೇ ಭಾನುವಾರದ ಸ್ವಚ್ಛತಾ ಅಭಿಯಾನದಲ್ಲಿ ಮಾತನಾಡಿದರು.

    ಯುವ ಬ್ರಿಗೇಡ್, ಸ್ವಚ್ಛತೆಗೆ ಆದ್ಯತೆ ನೀಡಿ ಪ್ರತಿಭಾನುವಾರ ಸ್ವಚ್ಛತೆ ಕಾರ್ಯ ಮಾಡುತ್ತಿರುವುದು ಪ್ರತಿಯೊಬ್ಬರಿಗೂ ಪ್ರೇರಣೆ. ದೇವಸ್ಥಾನದ ಆವರಣ, ಶಾಲಾ ಮೈದಾನ, ಪ್ರಮುಖರಸ್ತೆ ಸೇರಿ ವಿವಿಧೆಡೆ ಸ್ವಚ್ಛ ಮಾಡಲಾಗಿದೆ.

    ಸ್ವಚ್ಛತೆ ಜತೆಗೆ ಸಸಿ ನೆಡುವ ಮೂಲಕ ಪರಿಸರ ಕಾಳಜಿ ಮೆರೆಯುತ್ತಿರುವುದು ಶ್ಲಾಘನೀಯ. ಇಂಥ ಕಾರ್ಯಕ್ಕೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಚ್ಛ ಭಾರತ ಕಲ್ಪನೆಗೆ ಶಕ್ತಿ ತುಂಬಬೇಕು ಎಂದರು.

    ಯುವ ಬ್ರಿಗೇಡ್ ಸಂಚಾಲಕ ಬೂದಿಬಸವ, ಸಹ ಸಂಚಾಲಕ ಆಕಾಶ, ಸದಸ್ಯರಾದ ಬಸವ ಚಿಕ್ಕಮಠ, ದೇವು ಚಿಕ್ಕಮಠ, ಶ್ರೀಕಾಂತ್, ಸುಗುರೇಶ್, ಬಸನಗೌಡ, ಸುರೇಶ್ ಪಾಟೀಲ್, ಅಂಬುಜಾಕ್ಷಿ, ಗಂಗಾಧರ, ಸಂಗಮೇಶ ಮಾಪಾ, ಷಣ್ಮುಖ ಹೂಗಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts