More

    ವಾಡಿ ಪುರಸಭೆಗೆ ಮುಹೂರ್ತ ಫಿಕ್ಸ್​; 27ರಂದು ಎಲೆಕ್ಷನ್​

    ವಾಡಿ: ಪುರಸಭೆ ಚುನಾವಣೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದ್ದು, 27ರಂದು ಚುನಾವಣೆ ನಡೆಸಲು ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿಗಳು ಸೋಮವಾರ ಸಂಜೆ ಆದೇಶ ಹೊರಡಿಸಿದ್ದಾರೆ.

    2022ರ ನ.9ರಂದು ವಾಡಿ ಪುರಸಭೆ ಅವಧಿ ಮುಕ್ತಾಯವಾಗಿತ್ತು, ಒಂದು ವರ್ಷ ಸ್ಥಳೀಯ ಜನಪ್ರತಿನಿಧಿಗಳಿಲ್ಲದೆ ಜನರು ಸಮಸ್ಯೆ ಅನುಭವಿಸುವಂತಾಗಿತ್ತು. ಇದೀಗ ರಾಜ್ಯದ ಎರಡು ಪಟ್ಟಣ ಪಂಚಾಯಿತಿ (ವಿಜಯಪುರ ಜಿಲ್ಲೆಯ ಚಡಚಣ, ಯಾದಗಿರಿ ಜಿಲ್ಲೆಯ ಹುಣಸಗಿ) ಹಾಗೂ ಎರಡು ಪುರಸಭೆಗಳಿಗೆ (ಕಲಬುರಗಿ ಜಿಲ್ಲೆಯ ವಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರ) ಸಾರ್ವತ್ರಿಕ ಚುನಾವಣೆ ನಡೆಸಲು ಚುನಾವಣೆ ಆಯೋಗ ಮುಂದಾಗಿದೆ.

    8ರಿAದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. 15ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ, 16ರಂದು ನಾಮಪತ್ರ ಪರಿಶೀಲನೆ, 18 ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದೆ. 27ರಂದು ಬೆಳಗ್ಗೆ 7ರಿಂದ ಸಂಜೆ 5ಗಂಟೆವರೆಗೆ ಮತದಾನ ನಡೆಯಲಿದೆ. ಮರು ಮತದಾನದ ಅಗತ್ಯವಿದ್ದರೆ 29ರಂದು ನಡೆಸಲಾಗುವುದು. 30ರಂದು ಫಲಿತಾಂಶ ಹೊರಬಿಳಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts