More

    ಕನ್ನಡಿಗ ಕೆಎಲ್ ರಾಹುಲ್‌ಗೆ ನಾಯಕತ್ವದ ಜತೆಗೆ ದಾಖಲೆ ಸಂಭಾವನೆ ನೀಡಿದ ಲಖನೌ!

    ನವದೆಹಲಿ: ಕನ್ನಡಿಗ ಕೆಎಲ್ ರಾಹುಲ್ ಐಪಿಎಲ್‌ಗೆ ಹೊಸದಾಗಿ ಸೇರ್ಪಡೆಗೊಂಡಿರುವ ಲಖನೌ ತಂಡಕ್ಕೆ ನಿರೀಕ್ಷೆಯಂತೆಯೇ ನಾಯಕರಾಗಿ ಶುಕ್ರವಾರ ಅಧಿಕೃತವಾಗಿ ನೇಮಕಗೊಂಡಿದ್ದಾರೆ. ಜತೆಗೆ ದಾಖಲೆಯ 17 ಕೋಟಿ ರೂ. ಸಂಭಾವನೆಯನ್ನೂ ಪಡೆಯಲಿದ್ದಾರೆ. ಮಾರ್ಕಸ್ ಸ್ಟೋಯಿನಿಸ್ (9.2 ಕೋಟಿ ರೂ) ಮತ್ತು ರವಿ ಬಿಷ್ಣೋಯಿ (4 ಕೋಟಿ ರೂ.) ಹರಾಜಿಗೆ ಮುನ್ನವೇ ತಂಡ ಸೇರಿರುವ ಮತ್ತಿಬ್ಬರು.

    ಹರಾಜಿಗೆ ಮುನ್ನ 2022ರ ಐಪಿಎಲ್‌ನಲ್ಲಿ ಕೆಎಲ್ ರಾಹುಲ್ ಅವರೇ ಅತ್ಯಧಿಕ ಸಂಭಾವನೆ ಪಡೆಯುವ ಆಟಗಾರ ಎನಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಶರ್ಮ, ಚೆನ್ನೈ ಸೂಪರ್‌ಕಿಂಗ್ಸ್ ತಂಡ ರವೀಂದ್ರ ಜಡೇಜಾ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡ ರಿಷಭ್ ಪಂತ್‌ರನ್ನು 2022ರ ಆವೃತ್ತಿಗೆ ತಲಾ 16 ಕೋಟಿ ರೂ.ಗೆ ರಿಟೇನ್ ಮಾಡಿಕೊಂಡಿದ್ದು ಇದುವರೆಗಿನ ಗರಿಷ್ಠ ಮೊತ್ತವಾಗಿತ್ತು. ಇನ್ನು ಕಳೆದ ವರ್ಷದ ಆವೃತ್ತಿಯವರೆಗೆ ಆರ್‌ಸಿಬಿ ತಂಡ ವಿರಾಟ್ ಕೊಹ್ಲಿಗೆ 17 ಕೋಟಿ ರೂ. ನೀಡುತ್ತಿತ್ತು. ಇದು ಐಪಿಎಲ್‌ನಲ್ಲಿ ಭಾರತೀಯ ಆಟಗಾರನಿಗೆ ಅತ್ಯಧಿಕ ಸಂಭಾವನೆ ಎನಿಸಿದೆ. ಆದರೆ ನಾಯಕತ್ವ ಕಳೆದುಕೊಂಡ ಬಳಿಕ ಹಾಲಿ ವರ್ಷ ಕೊಹ್ಲಿ ಸಂಭಾವನೆ 15 ಕೋಟಿ ರೂ.ಗೆ ಇಳಿದಿದೆ.

    ಅಹಮದಾಬಾದ್‌ಗೆ ಹಾರ್ದಿಕ್ ನಾಯಕ
    ಇನ್ನು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಈಗಾಗಲೆ ವರದಿಯಾದಂತೆ ಅಹಮದಾಬಾದ್ ತಂಡದ ನಾಯಕರಾಗಿ ಅಧಿಕೃತವಾಗಿ ನೇಮಕಗೊಂಡಿದ್ದಾರೆ. ಹಾರ್ದಿಕ್ ಜತೆಗೆ ರಶೀದ್ ಖಾನ್ ಕೂಡ ತಲಾ 15 ಕೋಟಿ ರೂ. ಸಂಭಾವನೆ ಪಡೆಯಲಿದ್ದರೆ, ಶುಭಮಾನ್ ಗಿಲ್ 8 ಕೋಟಿ ರೂ.ಗೆ ತಂಡ ಸೇರಿದ್ದಾರೆ. ಹರಾಜಿಗೆ ಲಖನೌ ತಂಡ 59.8 ಕೋಟಿ ರೂ. ಮತ್ತು ಅಹಮದಾಬಾದ್ 52 ಕೋಟಿ ರೂ. ಉಳಿಸಿಕೊಂಡಿದೆ.

    PHOTO: ಟೀಮ್ ಇಂಡಿಯಾ ಸ್ಪಿನ್ನರ್ ಅಕ್ಷರ್ ಪಟೇಲ್ ನಿಶ್ಚಿತಾರ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts