More

    ಕಿರುಕುಳಕ್ಕೆ ಬೇಸತ್ತು KKRTC ನೌಕರ ಆತ್ಮಹತ್ಯೆಗೆ ಯತ್ನ

    ಕಲಬುರಗಿ: ಡಿಪೋ ಮ್ಯಾನೇಜರ್​ ತನಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಚಾಲಕ ಕಂ ನಿರ್ವಾಹಕರೊಬ್ಬರು ಡೀಸೆಲ್​ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಲಬುರಗಿ ಡಿಪೋ-2ರಲ್ಲಿ ನಡೆದಿದೆ.

    ಆತ್ಮಹತ್ಯೆಗೆ ಯತ್ನಿಸಿದವರನ್ನು ಕಲಬುರಗಿ ಜಿಲ್ಲೆ ಅಫ್ಜಲ್​ಪುರ ತಾಲ್ಲೂಕಿನ ಇಂಗಳಗಿ ಗ್ರಾಮದ ನಿವಾಸಿ ಬೀರಣ್ಣ ಎಂದು ಗುರತಿಸಲಾಗಿದ್ದು, ಇವರು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ ಚಾಲಕ ಕಂ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ.

    ಕಲಬುರಗಿಯಿಂದ ಅಫ್ಜಲ್​ಪುರಕ್ಕೆ ಪ್ರತಿನಿತ್ಯ 8 ಸಿಂಗಲ್​ ಟ್ರಿಪ್​ ಹೋಗಿ ಬರುವಂತೆ ಸೂಚಿಸಲಾಗುತ್ತಿತ್ತು. ಒಂದು ವೇಳೆ ಗುರಿ ತಲುಪದಿದ್ದಲ್ಲಿ ಮಾರನೇ ದಿನ ಡ್ಯೂಟಿ ಕೊಡದೆ ಡಿಪೋ ಮ್ಯಾನೇಜರ್​ ಮಂಜುನಾಥ್​ ಸತ್ತಾಯಿಸುತ್ತಿದ್ದರು. ಇದರಿಂದ ಮನನೊಂದಿದ್ದ ಬೀರಣ್ಣ ಬಸ್​ ಡಿಪೋದಲ್ಲಿ ಡೀಸೆಲ್​ ಸುರಿದಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    Suicide Attempt

    ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ ದಿನಾಂಕ ಫಿಕ್ಸ್​; ಪ್ರಿಯಾಂಕ ಗಾಂಧಿ ಚಾಲನೆ

    ಎಲ್ಲರಿಗೂ ತೊಂದರೆಯಾಗಿದೆ

    ಈ ಕುರಿತು ಪ್ರತಿಕ್ರಿಯಿಸಿರುವ ಕೆಕೆಆರ್​ಟಿಸಿಡಿಸಿ ಸಿದ್ದಪ್ಪ ಗಂಗಾಧರ್​ ಶಕ್ತಿ ಯೋಜನೆ ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಡ್ರೈವರ್​ಗಳಿಗೆ ಹೆಚ್ಚುವರಿ ಶೆಡ್ಯೂಲ್​ ಹಾಕಲಾಗಿದೆ. ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಹಿನ್ನಲೆ ಹೆಚ್ಚುವರಿ ಟ್ರಿಪ್ ಮಾಡಲು ಸೂಚಿಸಲಾಗಿದೆ.

    ಇದರಿಂದಾಗಿ ಡ್ರೈವರ್​ ಬೀರಣ್ಣ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಹಿಂದೆ ಸಾಮಾನ್ಯವಾಗಿ ಆರು ಟ್ರಿಪ್​ ಇತ್ತು ಈಗ 8 ಟ್ರಿಪ್​ ಮಾಡಲಾಗಿದೆ. ಇದಿರಿಂದಾಗಿ ಎಲ್ಲರಿಗೂ ತೊಂದರೆಯಾಗಿದೆ. ಹಿಂದಿನ ಡಡಿಪೋ ವರದಿ ತೆಗೆದು ನೋಡಿದಾಗ ನಮ್ಮ ಬಗ್ಗೆ ಒಳ್ಳೆಯ ರೆಕಾರ್ಡ್​ ಇದೆ. ಹೊಸ‌ ಬಸ್ ಹಾಗೂ ಸಿಬ್ಬಂದಿಗಳು ಬರಲಿದ್ದಾರೆ ಆಗ ಈ ಟ್ರಿಪ್ ಲೋಡ್ ಕಡಿಮೆ‌ಯಾಗುತ್ತೆ ಎಂದು ಕೆಕೆಆರ್​ಟಿಸಿ ಡಿಸಿ ಸಿದ್ದಪ್ಪ ಗಂಗಾಧರ್​​ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts