More

    ಪಾಲಿಕೆಯ ನಲ್ಲಿಯಲ್ಲಿ ನೀರಿನ ಬದಲು ವೈನ್​ ಬಂದರೆ ಹೇಗಾಗಬೇಡ; ಹಾಗಾದಾಗ ಈ ಊರಿನ ಮಂದಿ ಮಾಡಿದ್ದು ಹೀಗೆ..!

    ಇಟಲಿ: ಈ ಹಳ್ಳಿಯವರಿಗೆ ಅವತ್ತು ಒಂದು ಶಾಕ್​ ಕಾದಿತ್ತು. ಅಡುಗೆ ಮಾಡಲು, ಸ್ನಾನ ಮಾಡಲು ನಲ್ಲಿ ತಿರುವಿದರೆ ನೀರಿನ ಬದಲಿ ಬಂದದ್ದು ಗುಲಾಬಿ ಬಣ್ಣದ ವೈನ್​!

    ಅದು ಇಟಲಿಯ ಮೊಡೆನಾ ಎಂಬ ಪುಟ್ಟ ಗ್ರಾಮ. ಅಲ್ಲಿ ನಲ್ಲಿಯಲ್ಲಿ ಬಂದದ್ದು ನೀರಿನ ಬದಲಿಗೆ ವೈನ್​. ಹಾಗೆ ನಲ್ಲಿಯಲ್ಲಿ ಬಂದದ್ದು ಸ್ಥಳೀಯವಾಗಿ ತಯಾರಿಸಲಾಗುವ ಲ್ಯಾಂಬ್ರುಸ್ಕೊ ಗ್ರಾಸ್ಪರೋಸಾ ಎಂಬ ಶುದ್ಧ ಗುಲಾಬಿ ವೈನ್​ ಎಂಬುದು ಅಲ್ಲಿನ ಕೆಲವರಿಗೆ ಬೇಗನೆ ಅರ್ಥವಾಗಿತ್ತು.

    ಮೊಡೆನಾದ ಕ್ಯಾಸ್ಟೆಲ್ವೆಟ್ರೋ ಪ್ರದೇಶದ ವಾಸಿಸುವ ಆ ಜನ ತಡ ಮಾಡಲಿಲ್ಲ. ಸಾಧ್ಯವಾದಷ್ಟು ಆ ‘ಅಮೂಲ್ಯ’ ವೈನ್​ನನ್ನು ಬಾಟಲಿ ತುಂಬಲು ಪ್ರಾರಂಭಿಸಿಯೇ ಬಿಟ್ಟರು!

    ಇಂತಹ ಅದ್ಭುತ, ಆಶ್ವರ್ಯಕರ ಪ್ರಸಂಗ ನಡೆದಿದ್ದು ಸಣ್ಣ ತಾಂತ್ರಿಕ ದೋಷದಿಂದ. ನಡೆದದ್ದು ಏನೆಂದರೆ ಆ ಗ್ರಾಮದ ಪಕ್ಕದಲ್ಲೇ ಸೆಟ್ಟೆಕಾನಿ ವೈನರಿ ಎಂಬ ವೈನ್​ ತಯಾರಿಸುವ ಕಂಪನಿ ಇದೆ. ಆ ಕಂಪನಿಯಲ್ಲಿ ಸೋರಿಕೆ ಉಂಟಾಗಿ ಹಳ್ಳಿಯ ಕುಡಿವ ನೀರಿನ ಪೈಪ್​ನಲ್ಲಿ ಬಂದಿದೆ.

    ಪೈಪ್​ನಲ್ಲಿ ಬಂದ ವೈನ್​ ನೀರಿಗಿಂತ ವೇಗವಾಗಿ ಮನೆ ಮನೆಯ ನಲ್ಲಿಗಳಲ್ಲಿ ಹರಿದು ಬಂದಿದೆ. ಆದರೆ ಈ ಬಗ್ಗೆ ತಿಳಿದ ಅಲ್ಲಿನ ನೀರುಗಂಟಿ ತಕ್ಷಣ ಪೈಪ್​ನ್ನು ಸರಿಪಡಿಸಿದ್ದಾನೆ. ಅಲ್ಲದೆ ಫೇಸ್​ಬುಕ್​ನಲ್ಲಿ ಇದರ ಬಗ್ಗೆ ಕ್ಷಮೆ ಕೇಳಿದ್ದಾನೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts