More

    ರೈತರೇ ಬೆಲೆ ನಿಗದಿ ಮಾಡುವ ಕಾಯ್ದೆ ಜಾರಿ ಮಾಡಿ ; ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಂಕರಯ್ಯ ಒತ್ತಾಯ

    ತುಮಕೂರು: ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಗೆ ಬದಲಾಗಿ, ಲಾಭದಾಯಕ ಬೆಲೆ ನೀಡಬೇಕು, ಹಾಲಿಗೆ ವೈಜ್ಞಾನಿಕ ಬೆಲೆ ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಗೂ ಎಪಿಎಂಸಿಗಳ ಒಳಗೆ ಮತ್ತು ಹೊರಗೆ ನಿಗದಿಗಿಂತ ಕಡಿಮೆ ಬೆಲೆಗೆ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡದಂತೆ ಕಾನೂನು ತರಲು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಲಾಯಿತು.

    ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಂಕರಯ್ಯ ಮಾತನಾಡಿ, ಕೃಷಿ ಪರಿಕರಗಳ ದರ ಹೆಚ್ಚಳ, ಮಾನವ ಸಂಪನ್ಮೂಲದ ಕೊರತೆ ಸೇರಿ ಹಲವಾರು ನೂನ್ಯತೆಗಳಿಂದ ಕೃಷಿ ಲಾಭದಾಯಕ ವೃತ್ತಿಯಾಗಿಲ್ಲ. ಇದರ ಪರಿಣಾಮ ಯುವಜನತೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ, ಕೃಷಿ ಉತ್ಪನ್ನಗಳ ಬೆಲೆ ರೈತರೇ ನಿಗದಿ ಮಾಡುವ ಕಾಯ್ದೆ ಜಾರಿಯಾಗಬೇಕು ಎಂದರು.

    ವೈಜ್ಞಾನಿಕ ಬೆಲೆ ಸಿಗಬೇಕೆಂಬುದು ರೈತರ ಹಲವಾರು ವರ್ಷಗಳ ಬೇಡಿಕೆಯಾಗಿದೆ. ಪ್ರಧಾನ ಮಂತ್ರಿಗಳು ಈ ನಿಟ್ಟಿನಲ್ಲಿ ಕಾಯ್ದೆ ಜಾರಿಗೆ ತರಬೇಕು, ಇಲ್ಲದಿದ್ದಲ್ಲಿ ರೈತರ ಮತ್ತಷ್ಟು ಆತ್ಮಹತ್ಯೆ ಪ್ರಕರಣಗಳು ವರದಿಯಾಗಲಿವೆ ಎಂದ ಅವರು, ಸರ್ಕಾರಿ ಅಧಿಕಾರಿಗಳಿಗೆ ಒಂದು ನಿಶ್ಚಿತ ಆದಾಯವಿರುವ ರೀತಿ ರೈತರಿಗೆ ನಿಗದಿತ ಆದಾಯ ಸಿಗುವಂತಹ ರೀತಿಯಲ್ಲಿ ವೈಜ್ಞಾನಿಕ ರೀತಿಯ ಬೆಲೆ ನಿಗದಿಯಾಗಬೇಕು ಎಂದರು.

    ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ್ಯಕಾರ್ಯದರ್ಶಿ ಸುರೇಶ್ ಮಾತನಾಡಿ, ನಾವು ಇತರ ಸಂಘಟನೆಗಳ ರೀತಿ ಸಂಘರ್ಷದ ಹಾದಿ ತುಳಿಯದೆ, ಸೌಹಾರ್ದಯುತವಾಗಿಯೇ ರೈತರಿಗೆ ಲಾಭದಾಯಕ ಬೆಲೆ ಕಲ್ಪಿಸಲು ನಿರಂತರ ಹೋರಾಟ ನಡೆಸುತ್ತೇವೆ. ಸರ್ಕಾರ ನಮ್ಮ ಮನವಿಗೆ ಸ್ಪಂದಿಸಲಿದೆ ಎಂಬ ನಂಬಿಕೆ ಇದೆ ಎಂದರು.

    ಜಿಲ್ಲಾ ಕಾರ್ಯದರ್ಶಿ ಸಂತೋಷ್ ಹಾರೋನಹಳ್ಳಿ ಮಾತನಾಡಿ, ಪಂಜಾಬ್ ಸರ್ಕಾರದ ರೀತಿ, ಎಪಿಎಪಿಯವರು ಒಂದು ಕೃಷಿ ಉತ್ಪನ್ನಕ್ಕೆ ನಿಗದಿ ಮಾಡುವ ಬೆಲೆಯಲ್ಲಿ ಮಾರುಕಟ್ಟೆಯ ಹೊರಗೆ ಅಥವಾ ಒಳಗೆ ಖರೀದಿಸಬೇಕು. ಖರೀದಿಸದ ವರ್ತಕರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತಹ ಕಾಯ್ದೆಯನ್ನು ಜಾರಿಗೆ ತರಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು. ದಕ್ಷಿಣ ಪ್ರಾಂತೀಯ ಕಾರ್ಯಕಾರಿ ಮಂಡಳಿ ಸದಸ್ಯ ಸತೀಶ್, ತುಮಕೂರು ತಾಲೂಕು ಅಧ್ಯಕ್ಷ ವಿಜಯಕುಮಾರ್ ಹೊನ್ನೇನಹಳ್ಳಿ, ಕಾರ್ಯದರ್ಶಿ ನರಸೇಗೌಡ ಮತ್ತಿತರರು ಪ್ರತಿಭಟನೆಯ ನೇತೃತ್ವವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts