More

    ಶುಕ್ರವಾರ ಬರುತ್ತಿದ್ದಾರೆ ಕಿಲಾಡಿಗಳು; ಮಹೇಂದ್ರ ಮುನೋತ್ ರಫ್ ಆ್ಯಂಡ್ ಟಫ್​ ಪೊಲೀಸ್​ ಅಧಿಕಾರಿ

    ಬೆಂಗಳೂರು: ಮಹೇಂದ್ರ ಮುನೋತ್ ಇದುವರೆಗೂ ಸಾಫ್ಟ್ ಪಾತ್ರಗಳಲ್ಲೇ ಹೆಚ್ಚಾಗಿ ನಟಿಸಿದ್ದರು. ಇದೇ ಮೊದಲ ಬಾರಿಗೆ ಅವರು ‘ಕಿಲಾಡಿಗಳು’ ಎಂಬ ಹೊಸ ಚಿತ್ರದಲ್ಲಿ ರಫ್ ಆಂಡ್ ಟಫ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದು, ಆ ಚಿತ್ರ ಡಿಸೆಂಬರ್ 17ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

    ‘ಕಿಲಾಡಿಗಳು’ ಮಕ್ಕಳ ಕಿಡ್ನಾಪ್ ಮತ್ತು ಅಂಗಾಂಗ ಮಾರಾಟದ ಜಾಲವನ್ನು ಭೇದಿಸುವ ಸಿನಿಮಾ. 2016ರಲ್ಲಿ ಮೈಸೂರಿನಲ್ಲಿ ನಡೆದ ಘಟನೆಯನ್ನು ಆಧರಿಸಿ ಕಥೆ-ಚಿತ್ರಕಥೆ ಬರೆದಿದ್ದಾರೆ ಬಿ.ಪಿ. ಹರಿಹರನ್. ಈ ಚಿತ್ರಕ್ಕಾಗಿ ಸಾಕಷ್ಟು ಸಂಶೋಧನೆ ಮಾಡಿರುವುದಾಗಿ ಹೇಳುವ ಹರಿಹರನ್, ಹಲವು ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದು ಕಥೆ ಬರೆದಿದ್ದಾರಂತೆ. ಬರೀ ಕಥೆ ಬರೆಯುವುದಷ್ಟೇ ಅಲ್ಲ, ಈ ಚಿತ್ರವನ್ನು ನಿರ್ದೇಶಿಸುವುದರ ಜತೆಗೆ, ಚಿತ್ರ ನಿರ್ವಣದಲ್ಲೂ ಅವರು ತೊಡಗಿಸಿಕೊಂಡಿದ್ದಾರೆ. ಈ ಚಿತ್ರವನ್ನು ನಿರ್ವಿುಸಿರುವ ಮಹೇಂದ್ರ ಮುನೋತ್, ಎಸಿಪಿ ಮಹೇಂದ್ರ ವರ್ಮ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಂಗಾಂಗ ಮಾರಾಟದ ಜಾಲವನ್ನು ಭೇದಿಸುವ ನಿಷ್ಠಾವಂತ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರಂತೆ.

    ಈ ಚಿತ್ರದಲ್ಲಿ 13 ಫೈಟ್​ಗಳಿದ್ದು, ಈ ಪೈಕಿ ಎಂಟು ಫೈಟ್​ಗಳಲ್ಲಿ ಮುನೋತ್ ಕಾಣಿಸಿಕೊಂಡಿದ್ದಾರೆ ಎನ್ನುತ್ತಾರೆ ನಿರ್ದೇಶಕರು. ಮಿಕ್ಕಂತೆ ಗುರುರಾಜ್ ಹೊಸಕೋಟೆ, ಸೀತಾರಾಮ್ ಅನುಪಮಾ, ಹರಿ ಮಹದೇವ್, ಮಾಸ್ಟರ್ ಕಿರಣ್, ಮಾಸ್ಟರ್ ಲೋಹಿತ್ ಕುಮಾರ್ ಮುಂತಾದವರು ನಟಿಸಿದ್ದಾರೆ. ಇನ್ನು ಈ ಚಿತ್ರಕ್ಕೆ ಎ.ಟಿ. ರವೀಶ್ ಮೂರು ಹಾಡುಗಳನ್ನು ಸಂಯೋಜಿಸಿದ್ದು, ಒಂದು ಹಾಡು ಪ್ರಾಮಾಣಿಕ ಮತ್ತು ನಿಷ್ಠಾವಂತ ಪೊಲೀಸ್ ಅಧಿಕಾರಿಗಳ ಕುರಿತಾಗಿದೆಯಂತೆ. ಇನ್ನೊಂದು ಹಾಡು ಮಕ್ಕಳ ಆಟಗಳ ಕುರಿತಾಗಿದ್ದರೆ, ಮತ್ತೊಂದು ಹಾಡು ಮನುಷ್ಯತ್ವದ ಕುರಿತಾಗಿದೆಯಂತೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts