More

    ಬಡ ರೋಗಿಗಳಿಗೆ ವರದಾನ ಡಯಾಲಿಸಿಸ್ ಯಂತ್ರ: 40 ಲಕ್ಷ ರೂ.ವೆಚ್ಚದಲ್ಲಿ ರೋಟರಿಯಿಂದ ಕೊಡುಗೆ

    ಬ್ರಹ್ಮಾವರ: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿ ತಿಂಗಳು ಸಾವಿರಾರು ರೂ. ಡಯಾಲಿಸಿಸ್‌ಗೆ ಖರ್ಚು ಮಾಡುವುದು ಅನಿವಾರ್ಯ. ಬಡವರಿಗೆ ಈ ಮೊತ್ತ ಭರಿಸುವುದು ಅಸಾಧ್ಯ. ಈ ನಿಟ್ಟಿನಲ್ಲಿ ಬ್ರಹ್ಮಾವರ ರೋಟರಿ ಸಂಸ್ಥೆ ಜುಲೈನಿಂದ ಮಾಸಿಕ ಉಚಿತ ಡಯಾಲಿಸಿಸ್ ಶಿಬಿರ ಆಯೋಜಿಸುತ್ತಿರುವುದು ಸಮಾಜಮುಖಿ ಕಾರ್ಯಕ್ಕೆ ಸಾಕ್ಷಿಯಾಗಿದೆ.

    ಬ್ರಹ್ಮಾವರ ರೋಟರಿ ಕ್ಲಬ್ 50ನೇ ವರ್ಷದ ಆಚರಣೆ ಪ್ರಯುಕ್ತ ರೋಟರಿ ಸೋಶಿಯಲ್ ವೆಲ್‌ಫೇರ್ ಟ್ರಸ್ಟ್ ಮೂಲಕ ಮಹತ್ತರ ಹೆಜ್ಜೆ ಇರಿಸಿದೆ. ಬ್ರಹ್ಮಾವರ ಬಳಿಯ ಹಾರಾಡಿ ಕಮಲಾ ಎ. ಬಾಳಿಗಾ ಮೆಡಿಕಲ್ ಸೆಂಟರ್‌ಗೆ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಮನೋವೈದ್ಯ ಡಾ.ಪಿ.ವಿ. ಭಂಡಾರಿ ಶಿಫಾರಸಿನ ಮೇರೆಗೆ ಬಡ ಜನರಿಗೆ ಕಿಡ್ನಿ ಡಯಾಲಿಸಿಸ್‌ಗೆ ಅನುಕೂಲವಾಗುವಂತೆ ಬ್ರಹ್ಮಾವರ ರೋಟರಿ ಸದಸ್ಯರು ಮತ್ತು ದಾನಿಗಳ ನೆರವಿನಿಂದ 40 ಲಕ್ಷ ರೂ.ವೆಚ್ಚದಲ್ಲಿ 3 ಡಯಾಲಿಸಿಸ್ ಯಂತ್ರ ಕೊಡುಗೆ ನೀಡಲಾಗಿದೆ.

    ಬಡವರು ಅತಿ ಕಡಿಮೆ ದರದಲ್ಲಿ ಕಿಡ್ನಿ ಡಯಾಲಿಸಿಸ್ ಮಾಡಬಹುದು. ಡಯಾಲಿಸಿಸ್ ಸಮಯದಲ್ಲಿ ಆರೋಗ್ಯ ತುರ್ತು ನಿಗಾ ಘಟಕ, ತಜ್ಞ ವೈದ್ಯರೂ ಸ್ಥಳದಲ್ಲಿರುತ್ತಾರೆ. ಕಿಡ್ನಿ ಸಮಸ್ಯೆ ನಿವಾರಣೆಗೆ ನಿಗದಿತ ದಿನದಂದು ಉಚಿತವಾಗಿ ನೇತ್ರ, ರಕ್ತ, ಡಯಬಿಟಿಸ್ ತಪಾಸಣೆ ಬ್ರಹ್ಮಾವರ ರೋಟರಿ ಸಹಭಾಗಿತ್ವದಲ್ಲಿ ಮಾಡಲಾಗಿದೆ. ಡಾ. ಮೇಘ ಪೈ, ಡಾ ಹರ್ಷವರ್ಧನ್ ಸೇರಿದಂತೆ ನುರಿತ ವೈದ್ಯಕೀಯ ತಂಡ ಇಲ್ಲಿ ಹಗಲಿರುಳು ಸೇವೆ ಸಲ್ಲಿಸುತ್ತದೆ. ಉಡುಪಿ ಶಾಸಕ ರಘುಪತಿ ಭಟ್‌ರೋಟರಿ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಕಿಡ್ನಿ ಸಮಸ್ಯೆಯಿಂದ ಬಳಲುವವರಿಗೆ ಯಂತ್ರ ವರದಾನ. ಬ್ರಹ್ಮಾವರ ರೋಟರಿಯವರು ಇಲ್ಲಿ ಡಯಾಲಿಸಿಸ್‌ಗೆ 3 ಯಂತ್ರ ನೀಡಿ ಜನರ ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡಿ ಸೇವಾ ಕಾರ್ಯ ಮಾಡುತ್ತಿದ್ದಾರೆ.
    ಡಾ . ಪಿ. ವಿ. ಭಂಡಾರಿ ಮನೋ ವೈದ್ಯರು ಉಡುಪಿ.

    ಹಲವಾರು ಮಂದಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವುದು ರೋಟರಿಯ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ರೋಟರಿ ಸದಸ್ಯರು ಮತ್ತು ಕೆಲವು ದಾನಿಗಳ ನೆರವಿನಿಂದ ಇದನ್ನು ನೀಡಲಾಗಿದೆ. ಮುಂದೆ ಇನ್ನೂ 2 ಯಂತ್ರ ನೀಡುವ ಉದ್ದೇಶ ಇದೆ.
    ಹರೀಶ್ ಕುಂದರ್, ನಿಕಟ ಪೂರ್ವ ಅಧ್ಯಕ್ಷರು ರೋಟರಿ ಬ್ರಹ್ಮಾವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts